ಬೆಂಗಳೂರು:- ಲೋಕಾಯುಕ್ತ ಲಂಚ ಪ್ರಕರಣದಲ್ಲಿ IPS ಅಧಿಕಾರಿ ಶ್ರೀನಾಥ ಜೋಶಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು,ಅವರನ್ನು ಬಂಧನ ಗ್ಯಾರಂಟೀ ಎನ್ನಲಾಗಿದೆ.
ಶ್ರೀನಾಥ ಜೋಶಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ಅರ್ಜಿಯನ್ನ ವಜಾ ಮಾಡಿದೆ.ಆ ಹಿನ್ನೆಲೆಯಲ್ಲಿ ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರ ಬಂಧನವಾಗುವ ಸಾದ್ಯತೆ ದಟ್ಟವಾಗಿದೆ.
ಏನಿದು ಪ್ರಕರಣ…..
ರಾಜ್ಯದ ಇತಿಹಾಸದಲ್ಲಿಯೇ ಪೋಲೀಸ ಇಲಾಖೆ ತಲೆತಗ್ಗಿಸುವಂತಹ ದೊಡ್ಡ ಹಗರಣವೊಂದು ಕಳೆದ ತಿಂಗಳು ಬೆಳಕಿಗೆ ಬಂದಿತ್ತು. ಸಾಕ್ಷಿ ಸಮೇತ ಇಬ್ಬರು IPS ಅಧಿಕಾರಿಗಳು ಸಿಕ್ಕು ಬಿದ್ದಿದ್ದರು.
ಲೋಕಾಯುಕ್ತದಲ್ಲಿ ಇದ್ದುಕೊಂಡು ದೊಡ್ಡ ದೊಡ್ಡ ಅಧಿಕಾರಿಗಳಿಗೆ ಏಜೆಂಟ್ ಮತ್ತು ಸಿಬ್ಬಂದಿಗಳ ಮೂಲಕ ನಿಮ್ಮನ್ನ ರೇಡ್ ಮಾಡ್ತೇವಿ ಅಂತಾ ಹೆದರಿಸಿ ಕೋಟಿ ಕೋಟಿ ಹಣ ವಸೂಲಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.ಅವಾಗಲೇ ಲೋಕಾಯುಕ್ತ ಎಸ್ ಪಿ ಶ್ರೀನಾಥ ಜೋಶಿ ಅವರನ್ನ ಲೋಕಾಯುಕ್ತದಿಂದ ರಿಲೀವ್ ಕೂಡಾ ಮಾಡಲಾಗಿತ್ತು.
ನಂತರ ಶ್ರೀನಾಥ ಜೋಶಿ ಅವರ ಹುಬ್ಬಳ್ಳಿ ಮತ್ತು ಬೆಂಗಳೂರ ಮನೆಯ ಮೇಲೆ ಲೋಕಾಯುಕ್ತ ಪೋಲೀಸರು ರೇಡ್ ಮಾಡಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.