ಕಟ್ಟಡ ನಕ್ಷೆ..ಶೇ 15 ಉಲ್ಲಂಘನೆಯಾಗಿದ್ದರೂ ಸಕ್ರಮ..ನಗರಾಭಿವೃದ್ಧಿ ಇಲಾಖೆಯಿಂದ ಅಧಿಸೂಚನೆ.

Share to all

ಕಟ್ಟಡ ನಕ್ಷೆ..ಶೇ 15 ಉಲ್ಲಂಘನೆಯಾಗಿದ್ದರೂ ಸಕ್ರಮ..ನಗರಾಭಿವೃದ್ಧಿ ಇಲಾಖೆಯಿಂದ ಅಧಿಸೂಚನೆ.

ಬೆಂಗಳೂರು:-ಇನ್ಮುಂದೆ ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಜನರು ಶೇ 15 ರಷ್ಟು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದರೂ ಸಹ ಸಕ್ರಮ ಮಾಡಿಕೊಳ್ಳಬಹುದು.ಹಾಗಂತ ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ.

1976 ರ ಕೆಎಂಸಿ ಆ್ಯಕ್ಟಗೆ ತಿದ್ದುಪಡೆ ತಂದಿರುವ ನಗರಾಭಿವೃದ್ಧಿ ಇಲಾಖೆ,ಕೆಎಂಸಿ 1976 ಉಪಪ್ರಕರಣ 1ರ ಸೆಕ್ಷನ್ 428 ಹಾಗೂ ಕೆಎಂಸಿ 1964 ರ ಉಪ ಪ್ರಕರಣ 1ರ ಸೆಕ್ಷನ್ 325 ಕ್ಕೆ ತಿದ್ದುಪಡೆ ತರಲಾಗಿದ್ದು,ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಮಾಡಲ್ ಬಿಲ್ಡಿಂಗ್ ಬೈಲಾ 2025 ಅನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.ಈ ಬಗೆಗಿನ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 30 ದಿನ ಅವಕಾಶ ನೀಡಲಾಗಿದೆ.

 

Oplus_16777216

ಕಟ್ಟಡ ಅನುಮೋದಿತ ನಕ್ಷೆಗಿಂತ 15% ರಷ್ಟು ಉಲ್ಲಂಘನೆಯಾಗಿದ್ದರೆ ಅದನ್ನು ಸಕ್ರಮ ಮಾಡಿಕೊಳ್ಳಬಹುದು.FAR ಮತ್ತು ಕಾರ್ ಪಾರ್ಕಿಂಗ್ ನಲ್ಲಿ 5% ರಷ್ಟು ಉಲ್ಲಂಘನೆಯಾಗಿದ್ದರೂ ಅದನ್ನು ಸಕ್ರಮಗೊಳಿಸಲು ಬೈಲಾದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಬೈಲಾಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಆಯುಕ್ತರು ಬೈಲಾದಂತೆ ಅನ್ವಯವಾಗುವ ಶುಲ್ಕವನ್ನು ಪಾವತಿಸಿಕೊಂಡು ಸಕ್ರಮಗೊಳಿಸಿ ಪರಿಷ್ಕೃತ ನಕ್ಷೆಯನ್ನು ನೀಡಬೇಕು.

ಉದಯ ವಾರ್ತೆ
ಬೆಂಗಳೂರು.


Share to all

You May Also Like

More From Author