ಕೆ.ಆರ್.ಐ.ಡಿ.ಎಲ್‌.ದಿನಗೂಲಿ ‌ನೌಕರನ ಮನೆ ಮೇಲೆ ಲೋಕಾಯುಕ್ತ ದಾಳಿ‌..ಅವನ ಆಸ್ತಿ ನೋಡಿ ಅಧಿಕಾರಿಗಳೇ ಶಾಕ್..

Share to all

ಕೆ.ಆರ್.ಐ.ಡಿ.ಎಲ್‌.ದಿನಗೂಲಿ ‌ನೌಕರನ ಮನೆ ಮೇಲೆ ಲೋಕಾಯುಕ್ತ ದಾಳಿ‌..ಅವನ ಆಸ್ತಿ ನೋಡಿ ಅಧಿಕಾರಿಗಳೇ ಶಾಕ್…

ಕೊಪ್ಪಳ:-ಕೆ.ಆರ್.ಐ.ಡಿ.ಎಲ್‌.ದಿನಗೂಲಿ ‌ನೌಕರನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ‌ ಮಾಡಿದ್ದು..ಅವನ ಆಸ್ತಿ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ

ಕೆ ಆರ್ ಐ ಡಿ ಎಲ್ ದಿನಗೂಲಿ ನೌಕರ ಕಳಕಪ್ಪ ನಿಡಗುಂದಿ ಮನೆಯ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮನೆಯಲ್ಲಿ ಅಪಾರ ಪ್ರಮಾಣದ ಬಂಗಾರ,ಬೆಳ್ಳಿ ಆಭರಣ ಪತ್ತೆಯಾಗಿದೆ.

ಆತನ ಮನೆ, ಜಮೀನು,ನಿವೇಶನ‌‌ ಕೇಳಿ‌ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ.ಕೊಪ್ಪಳದಲ್ಲಿ ಬರೋಬ್ಬರಿ 24 ಮನೆ ಹೊಂದಿರೋ ದಿನಗೂಲಿ‌ ನೌಕರ
ಕಳಕಪ್ಪ ನೀಡಗುಂದಿಗೆ ಸೇರಿದ ಆರು ಕಡೆ ದಾಳಿ ಮಾಡಲಾಗಿದೆ.

ಕಳೆದ ಆರು ತಿಂಗಳ ಹಿಂದೆ ನೌಕರಿಯಿಂದ ಕಳಕಪ್ಪನನ್ನ ವಜಾ ಮಾಡಲಾಗಿತ್ತು.
ಇಂದು ಪರಿಶೀಲನೆ ‌ಮಾಡಿದಾಗ,ಕಳಕಪ್ಪ ಹಾಗೂ ಅವರ ಪತ್ನಿ ಹೆಸರಲ್ಲಿ 6 ಮನೆಗಳು,02 ನಿವೇಶನಗಳು,ಮತ್ತು 40 ಎಕರೆ ಜಮೀನು,ಹಾಗೂ ಬೇನಾಮಿಯಾಗಿ ಅವರ ಹೆಂಡತಿ ತಮ್ಮನ ಹೆಸರಲ್ಲಿ 08 ಮನೆಗಳು,02 ನಿವೇಶನ,ಸ್ವಂತ ಸಹೋದರನ ಹೆಸರಲ್ಲಿ ಹತ್ತು ಮನೆಗಳು ಹಾಗೂ ವಿವಿಧ ಬ್ಯಾಂಕ್ ದಾಖಲೆ ಪತ್ತೆಯಾಗಿವೆ.

ಒಟ್ಟು 24 ಮನೆ,04 ನಿವೇಶನ,40 ಎಕರೆ ಕೃಷಿ ಜಮೀನು,350 ಗ್ರಾಂ ಬಂಗಾರ,1.5 ಕೆಜಿ ಬೆಳ್ಳಿ ಆಭರಣ,02 ಬೈಕ್ ಹಾಗೂ 2 ಕಾರ್ ಪತ್ತೆಯಾಗಿದೆ.

ಲೋಕಾಯುಕ್ತದಲ್ಲಿ ದೂರು ದಾಖಲಾದ ಹಿನ್ನಲೆ ಇಂದು ಕಳಕಪ್ಪ ನೀಡಗುಂದಿ ಮನೆ ಮೇಲೆ ದಾಳಿ.
ಕೆ.ಆರ್.ಐಡಿಎಲ್‌ ನಲ್ಲಿ ಅಕ್ರಮವಾಗಿದೆ ಎಂದು ದೂರು ನೀಡಿದ್ದ ಅಧಿಕಾರಿಗಳು.
ಹಿಂದಿನ ಅಧಿಕಾರಿ ZM ಚಿಂಚೋಳಿಕರ್,ಹಾಗೂ ಕಳಕಪ್ಪ ವಿರುದ್ದ ದೂರು ದಾಖಲಾಗಿತ್ತು.

ಪ್ರಕರಣದ ಎರಡನೇ ಆರೋಪಿಯಾಗಿರೋ‌‌‌ ಕಳಕಪ್ಪ.
108 ವಿವಿದ ಕಾಮಗಾರಿಗಳ ಹೆಸರಲ್ಲಿ 72 ಕೋಟಿಗೂ ಅಧಿಕ ಅಕ್ರಮ ಎಸಗಿದ್ದು.
ಇಲಾಖೆಯ ಅನುಮತಿ ಪಡೆಯದೆ ಹಣದ ವಹಿವಾಟು ನಡೆಸಿದ್ದರು ಎನ್ನಲಾಗಿದೆ.

ಉದಯ ವಾರ್ತೆ
ಕೊಪ್ಪಳ.


Share to all

You May Also Like

More From Author