ಅಕ್ರಮ ಅಕ್ಕಿ ದಂಧೆಯ ಕಳ್ಳಾಟ..ಹುಬ್ಬಳ್ಳಿ ಪೋಲೀಸರು ಮತ್ತು ಪಿಸ್ತೂಲ ಬಾಬಾ..
ಹುಬ್ಬಳ್ಳಿ:- ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ಕಳೆದ ಐದು ದಿನದ ಹಿಂದೆಯೇ ಪಡಿತರ ಅಕ್ಕಿಗೆ ಸಂಬಂಧಿಸಿದಂತೆ ದೂರೊಂದು ದಾಖಲಾದರೂ ಅಕ್ಕಿಯ ಕಿಂಗ್ ಪಿನ್ ಮೇಲೆ ಈವರೆಗೂ ಕೇಸ್ ದಾಖಲಾಗಿಲ್ಲಾ..ಇವರನ್ನೂ ಮ್ಯಾನೇಜ್ ಮಾಡಿದನಾ ಪಿಸ್ತೂಲ ಬಾಬಾ ಅನ್ನೋ ಅನುಮಾನ ಠಾಣೆಯ ಒಳ ಹೊರಗೂ ಮಾತುಗಳು ಕೇಳಿ ಬರತೀವೆ…
ಯಾವುದೋ ಒಂದು ಅರ್ಜಿ ಬಂದರೆ ಸಾಕು ಪೋಲೀಸರು ಬ್ಯಾಟರಿ ಹಿಡಕೊಂಡು ಕಾಲ್ ಡಿಟೇಲ್..ಸಿಸಿಟಿವಿ ಪುಟೇಜ್ ಅದು..ಇದು ಅಂತಾ ಹುಡುಕುವ ಪೋಲೀಸರು ಈ ಅಕ್ಕಿ ಪ್ರಕರಣದಲ್ಲಿ ಸ್ವಿಚ್ಡ್ಆಪ್ ಆಗಿರೋದು ಯಾಕೆ ಅಂತಾ ಹುಬ್ಬಳ್ಳಿ ಮಂದಿ ಮಾತಾಡಕ ಹತ್ಯಾರ.

ಕಳೆದ ಬುಧವಾರ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯಲ್ಲಿ ಅಕ್ರಮ ಅಕ್ಕಿಯ ಪ್ರಕರಣ ದಾಖಲಾಗಿದ್ದು ಸಣ್ಣದೇನು ಅಲ್ಲಾ ಬರೋಬ್ಬರಿ 54 ಟನ್ ಅಕ್ಕಿ.ಹತ್ತು ವ್ಹೀಲ್ ನ ಎರಡು ಲಾರಿ..ಆದರೂ ಪೋಲೀಸರ ಬ್ಯಾಟರೀ ಇನ್ನೂ ಚಾರ್ಚೇ ಆಗಿಲ್ಲಾ…ಅಂದರೆ ಪಿಸ್ತೂಲ್ ಬಾಬಾ ಬಂದು ಭೇಟಿಯಾದನಾ ಅಥವಾ ಇನ್ನೂ ಆ ಪಿಸ್ತೂಲ ಬಾಬಾನ ಹೇಗೆ ತರೋದು ಅಂತಾ ಹಿಂದೆ ಮುಂದೆ ನೋಡತಾ ಇದ್ದಾರಾ..
