ಪಡಿತರ ಅಕ್ಕಿ ಪ್ರಕರಣ..ಹಾವೇರಿ ಪಿಸ್ತೂಲ ಬಾಬಾನ ಗೋಡೌನಗೆ ಬೆಂಡಿಗೇರಿ ಪೋಲೀಸರು…ಪಿಸ್ತೂಲ ಬಾಬಾ ಸ್ವಿಚ್ಡ್ ಆಪ್…

Share to all

ಪಡಿತರ ಅಕ್ಕಿ ಪ್ರಕರಣ..ಹಾವೇರಿ ಪಿಸ್ತೂಲ ಬಾಬಾನ ಗೋಡೌನಗೆ ಬೆಂಡಿಗೇರಿ ಪೋಲೀಸರು…ಪಿಸ್ತೂಲ ಬಾಬಾ ಸ್ವಿಚ್ಡ್ ಆಪ್…

ಹುಬ್ಬಳ್ಳಿ:- ಕಳೆದ ಬುಧವಾರ ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ದಾಖಲಾದ ಪಡಿತರ ಅಕ್ಕಿ ಕಳ್ಳತನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇನ್ಸ್ಪೆಕ್ಟರ್ ನಾಯಕ ಹಾಗೂ ಪಿಎಸ್ ಆಯ್ ರವಿ ವಡ್ಡರ ನೇತೃತ್ವದ ತಂಡ ಇಂದು ಸಾಯಂಕಾಲ ಹಾವೇರಿಗೆ ತೆರಳಿ ಅಕ್ಕಿ ಕಿಂಗ್ ಪಿನ್ ಪಿಸ್ತೂಲ ಬಾಬಾನ ಗೋಡೌನಗೆ ತೆರಳಿ ತನಿಖೆ ನಡೆಸಿದ್ದಾರೆ.

ಹಾವೇರಿಗೆ ಬೆಂಡಿಗೇರಿ ಪೋಲೀಸ ಟೀಂ ಎಂಟ್ರಿ ಕೊಡತಿದ್ದಂತೆ ಹಾವೇರಿಯಿಂದ ಕಾಲಕಿತ್ತ ಪಿಸ್ತೂಲ ಬಾಬಾ ಪೋನ್ ಸ್ವಿಚ್ಡ್ ಆಪ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ಸ್ಪೆಕ್ಟರ್ ನಾಯಕ ಆ್ಯಂಡ್ ಟೀಂ ಪಿಸ್ತೂಲ್ ಬಾಬಾ ಎಲ್ಲೆ ಇದ್ದರೂ ಸರಿ ಅವನನ್ನು ಹೆಡಮುರಿ ಕಟ್ಟಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡೇ ಅಕ್ಕಿ ಕಿಂಗ್ ಪಿನ್ ಕಳ್ಲ ದಂಧೆ ಬೇಧಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ..

ಪೋಲೀಸರು ಚಾಪೆ ಬುಡಕ್ಕೆ ನುಸುಳಿದರೆ,ಪಿಸ್ತೂಲ ಬಾಬಾ ರಂಗೋಲಿ ಬುಡಕ್ಕೆ‌ ನುಸುಳುತ್ತಾನೆ..ಅಂತಹದರಲ್ಲಿ ಇನ್ಸ್ಪೆಕ್ಟರ್ ಈ ಪ್ರಕರಣದಲ್ಲಿ ನಾಯಕರಾಗತಾರಾ ಅಥವಾ ಖಳನಾಯಕರಾಗತಾರಾ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author