ಹುಬ್ಬಳ್ಳಿ:- ಹೌದು ಇವತ್ತು ಇಡೀ ವಾಣಿಜ್ಯ ನಗರಿ ಐದನೇ ದಿನದ ಗಣಪತಿ ವಿಸರ್ಜನೆಯ ಸಡಗರ ಸಂಬ್ರಮದಲ್ಲಿದ್ದರೆ ಹುಬ್ಬಳ್ಳಿಯ ಪೋಲೀಸರು ಗಣೇಶ ಅನ್ನೋ ವ್ಯಕ್ತಿಯನ್ನ ಮಟ..ಮಟ ಮಧ್ಯಾಹ್ನವೇ ಎತ್ತಾಕೊಂಡು ಹೋಗಿದ್ದರು.
ಮದ್ಯಾಹ್ನ ಹರ್ಷ ಕಾಂಪ್ಲೆಕ್ಸ್ ಗೆ ನುಗ್ಗಿದ ಹುಬ್ಬಳ್ಳಿ ಪೋಲೀಸರು ಗಣೇಶನನ್ನು ಎಬಿಸಿದ್ದಾರೆ..ಗಣೇಶನಿಗೂ ಈ ಹಿಂದೆ ಮಾದಕ ವಸ್ತು ಮಾರಾಟದಲ್ಲಿ ಜೈಲು ಸೇರಿರುವ ವ್ಯಕ್ತಿಯೊಬ್ಬನೊಂದಿಗೆ ನಂಟಿರುವ ಶಂಕೆಯಿಂದ ಪೋಲೀಸರು ಗಣೇಶನನ್ನು ಎಬಿಸಿದ್ದರು.
ಗಣೇಶನನ್ನು ಪೋಲೀಸರು ಒಯ್ದದ್ದೇ ತಡ ಆ ಒಂದು ಪಕ್ಷದ ಮುಖಂಡ ಸತತವಾಗಿ ಅವರಿಂದ ಇವರಿಂದ ಪೋನ್ ಮಾಡಿಸಿದ್ದೇ ಮಾಡಿಸಿದ್ದು.ಕೊನೆಗೆ ಪೋಲೀಸರು ಆ ಮುಖಂಡನ ಪೋನಿಗೆ ಮಣಿದು ಗಣೇಶನನ್ನು ವಿಸರ್ಜನೆ ಮಾಡದೇ ಮತ್ತೆ ಬರಬೇಕು ಅಂತಾ ಆ ಮುಖಂಡನ ಜಾವಾಬ್ದಾರಿ ಮೇಲೆ ಕಳಿಸಿಕೊಟ್ಟಿದ್ದಾರಂತೆ.
ಅವನನ್ನು ಪೋಲೀಸರು ವಶಕ್ಕೆ ಪಡೆದಿದ್ದು ಸಾಮಾನ್ಯ ಕೇಸಿನಲ್ಲಿ ಅಲ್ಲವಂತೆ.ಹಾಗಾದರೆ ಪೋಲೀಸರು ಅವನನ್ನು ಒಯ್ದದ್ದು ಯಾಕೆ.? ಮತ್ತೆ ಕಳಿಸಿಕೊಟ್ಟಿದ್ದು ಯಾಕೆ.? ಅನ್ನೋದನ್ನ ಗೌಡ್ರೇ ಉತ್ತರಿಸಬೇಕು..