ಪಿಸ್ತೂಲ ಬಾಬಾ ಹಾಗೂ ಒಂಬತ್ತು ಸಹಚರರು ಆರೆಸ್ಟ್ ..
ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಸಚಿನ್ ಕಬ್ಬೂರ..
ಹುಬ್ಬಳ್ಳಿ:-ಹೌದು ಪಡಿತರ ಅಕ್ಕಿ ದಂಧೆ ಅಂದರೆ ಹುಬ್ಬಳ್ಳಿ ಮತ್ತು ಹಾವೇರಿಯಲ್ಲಿ ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ.ಆ ಆಲದ ಮರಕ್ಕೆ ಪೋಲೀಸರು ಕೈ ಹಾಕಿದರೆ ಸಾಕು ಅವರನ್ನು ಆ ಪೋಲೀಸ ಠಾಣೆಯಿಂದಲೇ ಎತ್ತಂಗಡಿ ಮಾಡಿಸೋ ಮಟ್ಟಿಗೆ ಈ ದಂಧೆಕೋರರು ಬೆಳೆದು ನಿಂತಿದ್ದಾರೆ..
ಅಂತಹ ಆಲದ ಮರದ ಬುಡಕ್ಕೆ ಕೈ ಹಾಕಿದ್ದ ಹುಬ್ಬಳ್ಳಿಯ ಬೆಂಡಿಗೇರಿ ಇನ್ಸ್ಪೆಕ್ಟರ್ ನಾಯಕ ಹಾಗೂ ಪಿಎಸ್ ಆಯ್ ರವಿ ವಡ್ಡರ ಹಾವೇರಿಯ ಆಲದ ಮರ..ಪಿಸ್ತೂಲ್ ಬಾಬಾ..ಸಚಿನ್ ಕಬ್ಬೂರ ಕೋಟೆಯನ್ನು ಛಿದ್ರ..ಛಿದ್ರ ಮಾಡಿದ್ದಾರೆ.
