ಹುಬ್ಬಳ್ಳಿ ತಾಲೂಕಿನ ಚಕ್ಕಡಿ ರಸ್ತೆ ಮಹಿಮೆ- ಬದುಕುಳಿದ ರೈತರು
ಹುಬ್ಬಳ್ಳಿ: ಚಕ್ಕಡಿ ರಸ್ತೆಯ ಹರಿಕಾರ ಎಂದು ನಾಮಫಲಕ ಹಾಕಿಕೊಳ್ಳುವ ನವಲಗುಂದ ಕ್ಷೇತ್ರದ ಶಾಸಕರ ರಸ್ತೆಗಳ ಸ್ಥಿತಿ ಯಾವ ಮಟ್ಟಕ್ಕೆ ಹೋಗಿವೆ ಎಂಬುದಕ್ಕೆ ಇವತ್ತಿನ ಘಟನೆ ಸಾಕ್ಷಿಯಾಗಿದ್ದು, ಹಲವು ರೈತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೌದು… ಹುಬ್ಬಳ್ಳಿ ತಾಲೂಕಿನ ಮಣಕವಾಡದ ರೈತ ಪರಮೇಶ್ವರ ಹಟ್ಟಿ ಎಂಬುವವರ ಹೊಲದಲ್ಲಿದ್ದ ಶೇಂಗಾ ಚಟ್ಟವನ್ನ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಇದರಲ್ಲಿದ್ದ ಹಲವು ರೈತರು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.