ಹುಬ್ಬಳ್ಳಿ ಅಕ್ಕಿ ಪ್ರಕರಣ..ಪೋಲೀಸರಿಗೂ ಶ್ರೀ ಸಿದ್ಧಾರೂಢರನ್ನು ತೋರಿಸಿದ ಶ್ರೀಧರ..

Share to all

ಹುಬ್ಬಳ್ಳಿ ಅಕ್ಕಿ ಪ್ರಕರಣ..ಪೋಲೀಸರಿಗೂ ಶ್ರೀ ಸಿದ್ಧಾರೂಢರನ್ನು ತೋರಿಸಿದ ಶ್ರೀಧರ..

ಹುಬ್ಬಳ್ಳಿ:- ಹೌದು ಹುಬ್ಬಳ್ಳಿ ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ದಾಖಲಾದ ಅಕ್ಕಿ ಕಳ್ಳತನ ಪ್ರಕರಣ ಅಗೆದಷ್ಟು ಬಗೆದಷ್ಟು ಆಳಕ್ಕೆ ಹೋಗತಾ ಇದೆ..ಹಾವೇರಿ ಪವನ ಮೋಬೈಲ್ ಮತ್ತು ಸಿಸಿಟಿವಿ ಪುಟೇಜ್ ಅಲ್ಲಿಗೇ ಮುಚ್ಚಿ ಹೋದವಾ ಅನ್ನೋ ಪ್ರಶ್ನೆ ಎದ್ದಿದೆ…

ಆ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಎರಡನೇ ಆರೋಪಿಯಾಗಬೇಕಿದ್ದ ಗದಗ ಅಕ್ಕಿ ಡಾನ್ ಶ್ರೀಧರ ಇನ್ನೂ ಸಹ ಬೆಂಡಿಗೇರಿ ಪೋಲೀಸರಿಗೆ ಶ್ರೀ ಸಿದ್ಧಾರೂಢರನ್ನು ತೋರಿಸತಾ ಇದ್ದಾನೆ.ಅಷ್ಟೇ ಅಲ್ಲದೇ ಅವರದ ಒಯ್ದು ಇವರ ಮುಂದೆ ಇವರದ ಒಯ್ದ ಅವರ ಮುಂದೆ ಚಾಡಿ ಹೇಳಿ ತನ್ನ ಬೇಳೆ ಬೇಯಿಸಿಕೊಳ್ಳತಿದ್ದಾನೆ ಅನ್ನೋದು ಈಗ ಗುಟ್ಟಾಗಿ ಉಳಿದಿಲ್ಲಾ.

ಶ್ರೀಧರನ ಚಾಲಾಕಿತನ..ಅವನು ಮಾತನಾಡಿದ್ದು..ಅವನ ಪೋಕಾಕಿ ಮಾತುಗಳಿಂದ ಪೋಲೀಸರನ್ನು ಮೋಡಿ ಮಾಡಿದನಾ.? ಅಥವಾ ಸಮಯ ನೋಡಿ ಶ್ರೀಧರನ ಎತ್ತಾಕಿಕೊಂಡು ಬರಲು ಪೋಲೀಸರು ಕಾಯತಾ ಇದ್ದಾರಾ ಕಾದು ನೋಡಬೇಕಾಗಿದೆ.

 ಹುಬ್ಬಳ್ಳಿ ಅಕ್ಕಿ ಪ್ರಕರಣಕ್ಕೂ ಮುಂಡರಗಿ ವೀರಭದ್ರನಿಗೂ ಏನೂ ನಂಟು.? ಎಲ್ಲವೂ ನೆಕ್ಷ್ಟ್ ..?

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author