ಹುಬ್ಬಳ್ಳಿ:- ಹಸಿವು ಮುಕ್ತ ರಾಜ್ಯ ಆಗಬೇಕೆಂಬ ಸಿಎಂ ಸಿದ್ದರಾಮಯ್ಯ ಅವರ ಕನಸಿಗೆ ಎಳ್ಳು ನೀರು ಬಿಡುವ ಸಂಗಣ್ಣನ “ಬುಲೆಟ್” ಸವಾರಿಯ ಕರಾಳ ಕಥೆಗೆ ಜಿಲ್ಲೆಯ ಡಿಡಿ ಅವರು ಗೊಬ್ಬರ ಹಾಕಿ ಬೆಳೆಸತಾ ಇದ್ದಾರಾ..?
ಹೌದು ಬಡವರ ಹೊಟ್ಟೆ ಸೇರಬೇಕಾದ ಅಕ್ಕಿ ಗೋಡೌನನಲ್ಲಿ ಇರುವೆಯಂತೆ ಸಕ್ಕರೆ ಮೇಯುವ ಜೊತೆ ಜೊತೆಗೆ ಆನೆಯಾಗಿ ಕಬ್ಬು ಮೇಯುವ ಹಾಗೆ ಸಂಗಣ್ಣಾ ಬುಲೆಟ್ ಸವಾರಿ ಮಾಡತಾ ಇದ್ದಾನೆ.ಸರಕಾರಿ ಗೋಡೌನದಿಂದಲೇ ಪಡಿತರ ಅಕ್ಕಿ ಕಳ್ಳಾಟ ನಡೀತಾ ಇದೆ ಅನ್ನೋದು ಡಿಡಿಯ ಆಪೀಸಿನ ಗೋಡೆಗಳೇ ಚೀರಿ ಚೀರಿ ಹೇಳತಾ ಇದ್ದರೂ ಆಹಾರ ಇಲಾಖೆಯ ಡಿಡಿ ಗಪ್ ಚುಪ್ಪಾ ಆದರಾ ಅಥವಾ ಕಣ್ಣಿದ್ದು ಕುರುಡರಾದರಾ..? ಎಲ್ಲದಕ್ಕೂ ಉದಯ ವಾರ್ತೆ ಸಾಕ್ಷಿ ಸಮೇತ ಲೆಕ್ಕ ಕೊಡಲಿದೆ.
ಸಂಗಣ್ಣ ಮತ್ತು ಬುಲೆಟ್ ಬಾಬಾನ ಪಡಿತರ ಅಕ್ಕಿಯ ಕಳ್ಳಾಟದ ಜಾಡು ಹಿಡಿದು ಬೆನ್ನತ್ತಿದ ಉದಯ ವಾರ್ತೆ ನ್ಯೂಸ್ ಗೆ ಸಿಕ್ಕ ಸಾಕ್ಷಿಗಳು ಇಡೀ ರಾಜ್ಯ ಸರಕಾರವನ್ನೇ ಬೆಚ್ಚಿಬೀಳಿಸುತ್ತೆ.
ಆ ಒಂದು ಸಂಗಣ್ಣ ಮತ್ತು ಬುಲೆಟ್ ಬಾಬಾನ ಅಕ್ಕಿ ಕಳ್ಳಾಟದ ಇಂಚಿಂಚೂ ಸಾಕ್ಷಿ ಸಮೇತ ಬಿಚ್ಚಿಡಲಿದೆ ನಿಮ್ಮ ಉದಯ ವಾರ್ತೆ ನ್ಯೂಸ್ ಕನ್ನಡ…