ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರವೇತನದಡಿ ತರಲು ಶಾಸಕ ಅಬ್ಬಯ್ಯ ಸೂಚನೆ..

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರವೇತನದಡಿ ತರಲು ಶಾಸಕ ಅಬ್ಬಯ್ಯ ಸೂಚನೆ..

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರವೇತನದಡಿ ತರಲು ಕ್ರಮವಹಿಸುವಂತೆ ರಾಜ್ಯ ಸ್ಲಮ್ ಬೋರ್ಡ್ ಅಧ್ಯಕ್ಷರು, ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ‌ ಪ್ರಸಾದ ಅಬ್ಬಯ್ಯ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಶಾಸಕರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸದ್ಯ 1001 ಪೌರಕಾರ್ಮಿಕರಿಗೆ ನೇರವಾಗಿ ವೇತನವನ್ನು ಸನ್ 2020 ರಿಂದ ನೀಡಲಾಗುತ್ತಿದೆ. ಆದರೂ ಕೂಡ 799 ಪೌರಕಾರ್ಮಿಕರು ಗುತ್ತಿಗೆದಾರರಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದು, ಸದಲ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಗುತ್ತಿಗೆದಾರರೂ ಪ್ರತಿ ತಿಂಗಳು ಪೂರ್ಣ ಪ್ರಮಾಣದಲ್ಲಿ ವೇತನವನ್ನು ನೀಡುತ್ತಿಲ್ಲ ಹಾಗೂ ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಗೆಯನ್ನು ಅವರ ಖಾತೆಗೆ ಭರಣಾ ಮಾಡುತ್ತಿಲ್ಲವೆಂದು ಈವರೆಗೂ ಸಾಕಷ್ಟು ದೂರುಗಳು ನನಗೆ ಮತ್ತು ಸರ್ಕಾರದ ಹಂತಕ್ಕೆ ತಲುಪಿರುತ್ತವೆ.

ಈ ವಿಷಯಕ್ಕೆ ಪುಷ್ಟಿ ತರುವಂತೆ ದಿನಾಂಕ: 20.09.2025 ರಂದು ಮುಂಜಾನೆ ಪಾಲಿಕೆಯ ವಲಯ ಕಚೇರಿ-02ಕ್ಕೆ ಸಂಬಂಧಿಸಿದ ವಾರ್ಡ ನಂ-17ರಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಪೌರಕಾರ್ಮಿಕರಾದ ಕೃಷ್ಣ ಚಿಕ್ಕಲಗೇರ (ವಜ್ಜಣ್ಣವರ), ಪಾಲಿಕೆಯ ಸ್ವಚ್ಚತಾ ಕಾರ್ಯನಿರ್ವಹಿಸುತ್ತಿರುವಾಗಲೇ ಪಾಲಿಕೆಯ ಸ್ವಚ್ಚತಾ ಗುತ್ತಿಗೆದಾರರಾದ ಕೃಷ್ಣಾ ಅರಬೇಡ ರವರು ಸರಿಯಾಗಿ ಪ್ರತಿ ತಿಂಗಳು ವೇತನ ನೀಡುತ್ತಿಲ್ಲ ಮತ್ತು ನೀಡುತ್ತಿರುವ ವೇತನದಲ್ಲೂ ಕೂಡ 5 ರಿಂದ 10 ಸಾವಿರದವರೆಗೂ ಕಠಾವು ಮಾಡಿ ಕಡಿಮೆ ಸಂಬಳ ನೀಡಿ ಶೋಷಿಸುತ್ತಿದ್ದಾರೆ ಎಂದು ನೊಂದು ವಿಷ ಸೇವಿಸಿ ಇಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಎಲ್ಲ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳ ಮುಖಾಂತರ ರಾಷ್ಟ್ರವ್ಯಾಪ್ತಿಯಾಗಿ ಪ್ರಚಾರವಾಗಿರುತ್ತದೆ. ಇದು ಪಾಲಿಕೆ ಮತ್ತು ಸರ್ಕಾರದ ಘನತೆಗೆ ಕುಂದುಂಟು ಮಾಡುವ ವಿಷಯವಾಗಿರುತ್ತದೆ. ಸಧ್ಯ ಕೃಷ್ಣ ಚಿಕ್ಕಲಗೇರ (ವಟ್ಟಣ್ಣವರ) ರವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಕೇಳಿ ತುಂಭಾ ವಿಷಾದವಾಗಿರುತ್ತದೆ ಪತ್ರದಲ್ಲಿ ವಿವರಿಸಿದ್ದಾರೆ.

ಸುಮಾರು 2009ನೇ ಇಸ್ವಿಯಿಂದ ಇಲ್ಲಿಯವರೆಗೂ ಪಾಲಿಕೆಯ ಸ್ವಚ್ಚತಾ ಗುತ್ತಿಗೆದಾರರು ಹೊರಗುತ್ತಿಗೆ ಪೌರಕಾರ್ಮಿಕರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಹಾಗೂ ಈ ಶೋಷಣೆಯನ್ನು ತಡೆಗಟ್ಟಲು ನಮ್ಮ ಸರ್ಕಾರವು ದಿನಾಂಕ:07.08.2017 ರಿಂದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸಿ ಸ್ವಚ್ಚತಾ ಕಾರ್ಯಗಳಿಗೆ ಮರು ಟೆಂಡರ್ ಕರೆಯದಂತೆ ಹಾಗೂ ಈಗಿರುವ ಸ್ವಚ್ಚತಾ ಗುತ್ತಿಗೆದಾರರನ್ನು ರದ್ದುಗೊಳಿಸುವಂತೆ ಆದೇಶಿಸಿದ ಪ್ರಯುಕ್ತ ಪಾಲಿಕೆಯಲ್ಲಿ ಸನ್ 2020 ಇಸ್ವಿಯಲ್ಲಿ 1001 ಸಂಖ್ಯೆ ಪೌರಕಾರ್ಮಿಕರಿಗೆ ನೇರವೇತನವನ್ನು ನೀಡಲಾಗಿರುತ್ತದೆ. ಆದಾಗ್ಯೂ ಕೂಡ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 799 ಸಂಖ್ಯೆ ಪೌರಕಾರ್ಮಿಕರು ನೇರವೇತನದಿಂದ ಹೊರಗುಳಿದಿದ್ದು, ಕೃಷ್ಣ ಚಿಕ್ಕಲಗೇರ (ವಟ್ಟಣ್ಣವರ) ರಂತೆ ಹಲವಾರು ಪೌರಕಾರ್ಮಿಕರು ಗುತ್ತಿಗೆದಾರರ ಶೋಷಣೆಗೆ ನೊಂದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದು ತುಂಬಾ ಶೋಚನಿಯ. ಆದ್ದರಿಂದ ಈಗಾಗಲೇ ಎಲ್ಲಾ ಸ್ವಚ್ಚತಾ ಗುತ್ತಿಗೆದಾರರ ಟೆಂಡರ್ ಅವಧಿಯು ಮುಗಿದು 14 ವರ್ಷಗಳಾಗಿದ್ದು, ಈ ಕೂಡಲೇ ಎಲ್ಲ ಸ್ವಚ್ಛತಾ ಗುತ್ತಿಗೆದಾರರ ಟೆಂಡರ್‌ಗಳನ್ನು ರದ್ದುಪಡಿಸಿ 799 ಸಂಖ್ಯೆ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ನೇರವಾಗಿ ವೇತನವನ್ನು ಪಾವತಿಸುವಂತೆ ಮುಂದಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಗತ್ಯ ನಿರ್ಣಯವನ್ನು ತೆಗೆದುಕೊಂಡು ಪೌರಕಾರ್ಮಿಕರ ಸೇವಾ ಭದ್ರತೆ, ಶೋಷಣೆ ರಹಿತ ಸ್ವಾಭಿಮಾನದ ಬದುಕು ಕಟ್ಟಿಕೊಡಲು ತುರ್ತಾಗಿ ಕಾರ್ಯೋನ್ಮಖರಾಗುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author