ಹುಬ್ಬಳ್ಳಿ APMC ಯಲ್ಲಿ ಝಂಡಾ ಹೊಡೆದ ಕೆಲ ಸಿಬ್ಬಂದಿಗಳು..ಬಿಟ್ಟೆಂಗ ಹೋಗಲಿ ಹುಬ್ಬಳ್ಳಿ ಅನ್ನೋ ಮಂದಿ…
ಹುಬ್ಬಳ್ಳಿ:- ಅದು ಏಷಿಯಾದಲ್ಲಿಯೇ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹುಬ್ಬಳ್ಳಿ ಇಲ್ಲಿ ಕೆಲ ಅಧಿಕಾರಿಗಳು ಹುಬ್ಬಳ್ಳಿ ಬಿಟ್ಟು ಹೋಗತಾ ಇಲ್ಲಾ…ಅಂದರೆ ಅವರಿಗೆ ಇಲ್ಲಿ ಎಷ್ಟೊಂದು ಕಮಾಯಿ ಇರಬೇಕು ಹೇಳಿ..
ಕಳೆದ ಹತ್ತಾರು ವರ್ಷದಿಂದ ಹುಬ್ಬಳ್ಳಿ ಎಪಿಎಂಸಿಯಲ್ಲಿಯೇ ಬಿಡಾರ ಹೂಡಿರುವ ಮೂರ್ನಾಲ್ಕು ಅಧಿಕಾರಿಗಳು ಅಲ್ಲಿ ಅವರು ಹೇಳಿದ್ದೇ ಆಟ..ಮಾಡಿದ್ದೇ ದಂಧೆ..


ಹತ್ತಾರು ವರ್ಷಗಳಿಂದ ಝಂಡಾ ಊರಿರುವ ಆ ಅಧಿಕಾರಿಗಳ ಬಗ್ಗೆ ಸಚಿವರು ಮಾಹಿತಿ ತರಿಸಿಕೊಂಡ ವರ್ಗಾವಣೆ ಮಾಡಿದರೆ ಮೂರು ಕಾಸಿಗೆ ಹರಾಜಾಗುವ ಮಾರುಕಟ್ಟೆಯ ಮಾನಾ ಮರ್ಯಾದೆ ಉಳಿಯುತ್ತೆ.ಇಲ್ಲಾ ಅಂದರೆ ಮಾರುಕಟ್ಟೆಯ ಮರ್ಯಾದೆ ಹರಾಜ ಆಗುವುದರಲ್ಲಿ ಸಂದೇಹವೇ ಇಲ್ಲಾ…

