ಗಣತಿಯಲ್ಲಿ ಕರ್ತವ್ಯ ಲೋಪ ಇಬ್ಬರು ಪಾಲಿಕೆಯ ಅಧಿಕಾರಿಗಳು ಸಸ್ಪೆಂಡ್…ಅಮಾನತ್ತು ಮಾಡಿ ಕಮೀಷನರ್ ಆದೇಶ.
ಹುಬ್ಬಳ್ಳಿ:- ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಇಬ್ಬರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:- ರುದ್ರೇಶ ಘಾಳಿ ಆದೇಶ ಮಾಡಿದ್ದಾರೆ.
ಗಣತಿ ಸಮೀಕ್ಷೆಯಲ್ಲಿ ಕಮೀಷನರ್ ರುದ್ರೇಶ ಘಾಳಿ ಅವರು ಪದೇ ಪದೇ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಎಚ್ಚರಿಕೆ ಕೊಟ್ಟರೂ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿ ಕರ್ತವ್ಯ ಲೋಪ ಮಾಡುವವರಿಗೆ ಎಚ್ಚರಿಕೆ ಘಂಟೆ ಬಾರಿಸಿದ್ದಾರೆ.