ಅಕ್ರಮಕ್ಕೆ ಸಾಥ್…ಪೋಲೀಸ ಇನಸ್ಪೆಕ್ಟರ್ ಸಸ್ಪೆಂಡ್..ಮಣ್ಣಿಗಾಗಿ ಮಂಕಾದ ಉದಯ ರವಿ…

Share to all

ಅಕ್ರಮಕ್ಕೆ ಸಾಥ್…ಪೋಲೀಸ ಇನಸ್ಪೆಕ್ಟರ್ ಸಸ್ಪೆಂಡ್..ಮಣ್ಣಿಗಾಗಿ ಮಂಕಾದ ಉದಯ ರವಿ…

ಬಳ್ಳಾರಿ:-ಪೋಲೀಸರು ಹೆಣ್ಣು..ಹೊನ್ನು..ಮಣ್ಣು ಯಾವುದರಲ್ಲೂ ನೋಡಿ ರೊಕ್ಕ..ರೊಕ್ಕ ಅಂತಾ ಬಾಯಿ ಬಿಡತಾರೆ ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಇನಸ್ಪೆಕ್ಟರ್ ಉದಯ ರವಿಯ ಮಣ್ಣಿನಾಟದಲ್ಲಿ ಸಸ್ಪೆಂಡ್ ಆಗಿರೋದು…

ಬಳ್ಳಾರಿ ಜಿಲ್ಲೆಯ ಹಲಗುಂದಿ ಗ್ರಾಮದಲ್ಲಿ ಅಕ್ರಮ ಗಣಿ ದಾಸ್ತಾನಿಗೆ ಉದಯ ರವಿ ಇನಸ್ಪೆಕ್ಟರ್ ಅವಕಾಶ ಮಾಡಿಕೊಟ್ಟಿದ್ದಾರೆಂಬ ಆರೋಪದ ತನಿಖೆ‌ನಡೆಸಿದ ಎಸ್ ಪಿ ಸುಮನ್ ಡಿ ಪನ್ನೇಕರ್ ತನಿಖೆ ನಡೆಸಿ ಅವರ ಶಿಫಾರಸ್ಸಿನ ಮೇರೆಗೆ ಪೋಲೀಸ ಮಹಾನಿರ್ಧೇಶಕ ಡಾ;ಎಂ ಸಲೀಮ್ ಅವರು ಬಳ್ಳಾರಿ ಗ್ರಾಮಾಂತರ ಠಾಣೆಯ ಇನಸ್ಪೆಕ್ಟರ್ ಉದಯ ರವಿ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ..

ಉದಯ ರವಿ ಅವರು ಬಳ್ಳಾರಿ ಗ್ರಾಮಾಂತರ ಪೋಲೀಸ ಠಾಣೆಗೆ ಬಂದು ಒಂದೂವರೆ ವರ್ಷ ಆಗಿತ್ತು. ಆ ಒಂದೂವರೆ ವರ್ಷದಲ್ಲಿ ಹಲವಾರು ಅಕ್ರಮದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್ ಪಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು…

ಉದಯ ವಾರ್ತೆ
ಬಳ್ಳಾರಿ.


Share to all

You May Also Like

More From Author