ಪಾಲಿಕೆಯಿಂದ ಒಂದಲ್ಲ..ಎರಡಲ್ಲಾ..ಮೂರು ವರ್ಷದಿಂದ ಮೂರು ನೋಟೀಸ್…
ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಪಾಲಿಕೆಯ ನೋಟೀಸಗಿಲ್ಲಾ,ಕವಡೆ ಕಾಸಿನ ಕಿಮ್ಮತ್ತು..ಒಂದಲ್ಲಾ..ಎರಡಲ್ಲಾ ಮೂರು ವರ್ಷದಿಂದ ನೊಟೀಸ್..ಮೂರು..ಮೂರು..ನೋ ರಿಸ್ಪಾನ್ಸ್..
ಈ ಹಿಂದೆ ಮಣಿವಣ್ಣನ್ನ ಕಮೀಷನರ ಇದ್ದಾಗ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಬಂದಿದೆ ಅಂದರೆ ಸಾಕು ಅಕ್ರಮ ಕಟ್ಟಡಗಳ ಮಾಲಿಕರು ಗಡ..ಗಡ..ಅಂತಿದ್ದರು.ಅದೇ ಈಗ ಮರುಕಳಿಸಿದೆ..ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಬಂದರೆ, ಇರಲಿ ಬಿಡಿ ಅವರದೇನು ಅನ್ನೋ ಕಾಲ ಬದಲಾಗಿ ಮತ್ತೆ ಭಯದ ವಾತಾವರಣ ಆರಂಭವಾಗಿದೆ.

ಹುಬ್ಬಳ್ಳಿ ಗೋಕುಲ ರಸ್ತೆಯ ವಾಡ್೯ ನಂಬರ 30 ರ ವ್ಯಾಪ್ತಿಯಲ್ಲಿ ಬರುವ ಸೆಂಟ್ರಲ್ ಎಕ್ಸ್ಪ್ರೆಸ್ ಕಾಲೋನಿಯಲ್ಲಿರುವ ತಾರಾ ಎಮರಾಲ್ಡ್ ಹೊಟೆಲ್ ನಲ್ಲಿ ಅಕ್ರಮವಾಗಿ ನಾಲ್ಕನೇ ಮಹಡಿ ಕಟ್ಟಿರುವುದು.
ಈ ಅಕ್ರಮ ನಾಲ್ಕನೇ ಮಹಡಿ ಕಟ್ಟಿರುವ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಗರ ಯೋಜನೆ 30-08-2023 ಕ್ಕೆ ಎರಡು ನೋಟೀಸ್ ಕೊಟ್ಟ ಸುಮ್ಮನಾಯ್ತು.ಅಂದರೆ ಅಲ್ಲಿ ಏನೋ ಸಮ್ಮತಿಂಗ್ ಆಗಿ ಮೂರನೇ ನೋಟೀಸ ಕೊಡಲೇ ಇಲ್ಲಾ..ಇದು ಅಂದಿನ ಪಾಲಿಕೆಯ ಆಡಳಿತಕ್ಕೆ ಹಿಡಿದ ಕೈಗನ್ನಡಿ.
