ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರ ರಜತ ಉಳ್ಳಾಗಡ್ಡಿಮಠ ಕೈಗೆ ನೀಡಿದ ಡಿಕೆಶಿ
ಹುಬ್ಬಳ್ಳಿ; ನಾಯಕತ್ವ ಕೊರತೆಯಲ್ಲಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಸಮಸ್ಯೆಯನ್ನು ಕೆಪಿಸಿಸಿ ಅಧ್ಯಕ್ಷ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಗೆಹರಿಸಿದ್ದಾರೆ. ತೀವ್ರ ಹಗ್ಗಜಗ್ಗಾಟದಲ್ಲಿ ಇದ್ದ ಸೆಂಟ್ರಲ್ ಕ್ಷೇತ್ರದ ನಾಯಕತ್ವವನ್ನು ಕೊನೆಗೆ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಹೆಗಲಿಗೆ ಹಾಕಲಾಗಿದೆ.
ನಗರ ಘಟಕದ ಮೂರು ವಿಧಾನಸಭಾ ಕ್ಷೇತ್ರದ BLA ಗಳನ್ನು ನೇಮಿಸುವ ಅಧಿಕಾರವನ್ನು ಆಯಾ ಕ್ಷೇತ್ರದ ಉಸ್ತುವಾರಿಗಳಿಗೆ ನೀಡಲಾಗಿದ್ದು ,ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಉಸ್ತುವಾರಿ ಹಾಲಿ ಶಾಸಕ ಪ್ರಸಾದ್ ಅಬ್ಬಯ್ಯ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರ ಪರಾಜಿತ ಅಭ್ಯರ್ಥಿ ದೀಪಕ್ ಚಿಂಚೋರಿಗೆ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಉಸ್ತುವಾರಿಯನ್ನು ರಜತ್ ಉಳ್ಳಾಗಡ್ಡಿಮಠ ಅವರಿಗೆ ನೀಡಿದ್ದಾರೆ.
ಮತ್ತೊಂದು ಕಡೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಉಸ್ತುವಾರಿಯನ್ನು ಪಡೆಯಬೇಕು ಎಂದು ಬಹಳ ಪ್ರಯತ್ನ ಪಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷರೊಬ್ಬರಿಗೆ ಈ ನೇಮಕ ಆದೇಶ ತೀವ್ರ ಹಿನ್ನಡೆಯಾಗಿದ್ದು ಸೆಂಟ್ರಲ್ ಕ್ಷೇತ್ರದಿಂದ ಹೈ ಕಮಾಂಡ್ ಅವರರನ್ನು ಕಡೆಗಣಿಸಿದಂತೆ ಆಗಿದೆ.