ಹೊಟೆಲ್ ರಾಜಾ… ರಾಜೇಂದ್ರನಿಗೆ ರಾಜ್ಯೋತ್ಸವ ಪ್ರಶಶ್ತಿ….
ಹುಬ್ಬಳ್ಳಿ:-ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಮಾಜಿಕ ವಿಭಾಗದಿಂದ ಹೊಟೆಲ್ ಉದ್ಯಮ ರಾಜೇಂದ್ರ. ವಿ. ಶೆಟ್ಟಿ ಆಯ್ಕೆಯಾಗಿದ್ದಾರೆ.

ಶ್ರೀ ಪಂಜುರ್ಲಿ ಸಮೂಹದ ಸ್ಥಾಪಕರಾದ ರಾಜೇಂದ್ರ. ವಿ. ಶೆಟ್ಟಿಯವರು, ಹುಬ್ಬಳ್ಳಿ ಧಾರವಾಡದಲ್ಲಿ ಚಿರಪರಿಚಿತ ವ್ಯಕ್ತಿ, ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ, ಸಮಾಜಕ್ಕೆ ಮಾದರಿಯಾಗಿ ಬೆಳೆದು ಬಂದವರು, ಬಂಟ ಸಮಾಜದ ಇತಿಹಾಸದಲ್ಲಿ ಪ್ರಥಮವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆಯುತ್ತಿರುವ ಪ್ರಥಮ ವ್ಯಕ್ತಿ, ನಿಜವಾಗಲೂ ಇದು ಬಂಟ ಸಮುದಾಯಕ್ಕೆ ಒಂದು ಸಂತೋಷದ ಕ್ಷಣ. ಇವರು ಮಾಡುವ ಅನೇಕ ಸಾಮಾಜಿಕ ಕಾರ್ಯಗಳಿಗೆ, ಈ ದಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಸಾಮಾಜಿಕ ವಿಭಾಗದಲ್ಲಿ ಇವರನ್ನು ಆಯ್ಕೆ ಮಾಡಿದೆ. ಇವರ ಸಾಧನೆ ಇನ್ನೂ ಹೆಚ್ಚಿನ ಮಟ್ಟಕ್ಕೆ ಒಯ್ಯಲಿ ಎಂದು ಬಂಟರ ಸಂಘ ಅಭಿನಂದನೆ ಸಲ್ಲಿಸಿದೆ.
