ತಂದೆ ಐರನ್ ಮ್ಯಾನ್…ಮಕ್ಕಳು ಓಶೀಯನ್ ಕಿಡ್..

Share to all

ತಂದೆ ಐರನ್ ಮ್ಯಾನ್…ಮಕ್ಕಳು ಓಶೀಯನ್ ಕಿಡ್..

ಪಣಜಿ:- ಅಪ್ಪ 28 ಕಿಲೋಮೀಟರ್ ಭಯಾನಕ ಶ್ರೀಲಂಕಾ ಕಡಲಿನಲ್ಲಿ ಈಜಿ ದೇಶದ ಯಾವುದೇ ಇನ್ಸ್ಪೆಕ್ಟರ್ ಒಬ್ಬರು ಮಾಡದ ಸಾಧನೆಯನ್ನು ಮಾಡಿ ಸೈ ಎನಿಸಿಕೊಂಡರೆ ಈಗ ಅವರ ಇಬ್ಬರು ಮಕ್ಕಳು ಗೋವಾದ ಕಡಲನ್ನು ಈಜುವ ಮೂಲಕ ನಾವೇನೂ ಕಮ್ಮಿ ಇಲ್ಲಾ ಅಂತಾ ತೋರಿಸಿಕೊಟ್ಟಿದ್ದಾರೆ.

ತಂದೆ ಮುರಗೇಶ ಚನ್ನಣ್ಣವರ ಹಾದಿಯನ್ನೇ ಹಿಡಿದ ಹದಿನಾಲ್ಕು ವರ್ಷದ ರೋನಕ ಚನ್ನಣ್ಣವರ ಹಾಗೂ ಹತ್ತು ವರ್ಷದ ರೋಮಿಲ್ ಚನ್ನಣ್ಣವರ ಅರೇಬಿಯನ್ ಸಮುದ್ರದಲ್ಲಿ ನಡೆದ Half ocean sea swim ಸ್ಪರ್ಧೆಯಲ್ಲಿ ಈಜಿ ಯಶಸ್ವಿಯಾಗಿದ್ದಾರೆ.

ಭಯಾನಕ ಸಮುದ್ರದ ಅಲೆಗಳ ಮದ್ಯೆ ತಂದೆಯಂತೆ ಧೈರ್ಯದಿಂದ 5 ಕಿಲೋಮೀಟರ್ ದೂರವನ್ನು ಕೇವಲ 2 ಘಂಟೆ 14 ನಿಷದಲ್ಲಿ ಈಜುವ ಮೂಲಕ ಮೊದಲ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ತಂದೆ ಮುರಗೇಶ ಚನ್ನಣ್ಣವರ ತಾಯಿ ಶ್ವೇತಾ ಹಾಗೂ ಅಜ್ಜಿ ಗೌರಮ್ಮ ಅವರ ಬೆಂಬಲ ಹಾಗೂ ಮಾರ್ಗದರ್ಶನ ನೀಡಿದ ಕಿರಣ ಹಾಗೂ ಅಮನ ಶ್ಯಾನಬಾಗ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author