ಎರಡು ದಶಕಗಳ ನಂತರ ಸೀನಿಯರ್ ರಿಪೋರ್ಟರಗಳನ್ನ ಗುರುತಿಸಿದ ಪಾಲಿಕೆ…ಮೆಹಬೂಬ ಮುನವಳ್ಳಿ..ರವಿಕುಮಾರ ಉಳ್ಳಾಗಡ್ಡಿಗೆ ರಾಜ್ಯೊತ್ಸವದ ಗರಿ...
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ವಿದ್ಯನ್ಮಾನ ವರದಿಗಾರರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ BTVಯ ಹಿರಿಯ ವರದಿಗಾರ ‘ಮೆಹಬೂಬ ಮುನವಳ್ಳಿ…. ಪವರ್ ಟಿವಿಯ ಹಿರಿಯ ವರದಿಗಾರ ರವಿಕುಮಾರ ಉಳ್ಳಾಗಡ್ಡಿ ಆಯ್ಕೆಯಾಗಿದ್ದಾರೆ.
ಅಲ್ಲದೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಕೊಡ ಮಾಡುವ ‘ರಾಜ್ಯೋತ್ಸವ ಧೀಮಂತ ಪ್ರಶಸ್ತಿಗೆ ಪಬ್ಲಿಕ್ ಟಿವಿಯ ವರದಿಗಾರ ಸುನೀಲ ಪಾಟೀಲ ಹಾಗೂ ರಾಜ್ ನ್ಯೂಸ್ ನ ಪ್ರಶಾಂತ ದಿನ್ನಿ ಕೂಡಾ ಆಯ್ಕೆಯಾಗಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಎರಡು ದಶಕಗಳಿಂದ ಕೆಲಸ ಮಾಡುತ್ತಿರುವ ಮೆಹಬೂಬ ಮುನವಳ್ಳಿ ಹಾಗೂ ರವಿಕುಮಾರ ಉಳ್ಳಾಗಡ್ಡಿ ಅವರು ಪ್ರತಿಷ್ಟಿತ ಚಾನಲ್ ಗಳಲ್ಲಿ ತನಿಖಾ ವರದಿಗಳ ಮೂಲಕ ರಾಜ್ಯಾದ್ಯಂತ ಹೆಸರು ಮಾಡಿದ್ದಾರೆ.
ಇನ್ನೂ ಇದ್ದದ್ದು ಇದ್ದಂಗೆ ಪಟಾ ಪಟ್ ಅಂತ ಮಾತನಾಡುವ ಪಬ್ಲಿಕ ಟಿವಿಯ ವರದಿಗಾರ ಸುನೀಲ್ ಪಾಟೀಲ ಸಹ ಹಲವು ಚಾನಲ್ ಗಳಲ್ಲಿ ಕೆಲಸ ಮಾಡಿ ಇದೀಗ ಪಬ್ಲಿಕ್ ಟಿವಿಯಲ್ಲಿ ಹುಬ್ಬಳ್ಳಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ರಾಜ್ ನ್ಯೂಸ್ ಪ್ರಶಾಂತ ದಿನ್ನಿ ಸಹ ಒಳ್ಳೆಯ ವರದಿಗಾರಿಕೆ ಮೂಲಕ ಹಲವು ಚಾನಲ್ ಗಳಲ್ಲಿ ಹೆಸರು ಮಾಡಿ ಈಗ ಧಾರವಾಡದ ರಾಜ್ ನ್ಯೂಸ್ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹು-ಧಾ ಮಹಾನಗರ ಪಾಲಿಕೆಯು ಇಂದು ಸಂಜೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್.. ಕಮೀಷನರ್ ಡಾ:- ರುದ್ರೇಶ ಘಾಳಿ ಸೇರಿದಂತೆ ಹಲವು ರಾಜಕೀಯ ನಾಯಕರು, ಗಣ್ಯರು ಭಾಗವಹಿಸಲಿದ್ದಾರೆ.