ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸರ ಕಾರ್ಯಾಚರಣೆ..ಕೋಟಿ ಕೋಟಿ ಹಣ ದೋಚುತ್ತಿದ್ದ RTI ಗ್ಯಾಂಗ್ ಅರೆಸ್ಟ್

Share to all

ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸರ ಕಾರ್ಯಾಚರಣೆ..ಕೋಟಿ ಕೋಟಿ ಹಣ ದೋಚುತ್ತಿದ್ದ RTI ಗ್ಯಾಂಗ್ ಅರೆಸ್ಟ್

ಹುಬ್ಬಳ್ಳಿ: RTI ಕಾರ್ಯಕರ್ತ ಎಂದು ಕೋಟಿ ಕೋಟಿ ಹಣವನ್ನು ದೋಚುತ್ತಿದ್ದ ಗ್ಯಾಂಗ್‌ನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕೋ ಆಪರೇಟಿವ್ ಬ್ಯಾಂಕುಗಳು ಸರ್ಕಾರಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದರು ಗ್ಯಾಂಗ್,
1 ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಅಡ್ವಾನ್ಸ್ ಪಡೆಯುವಾಗ ಖದೀಮರು ಸಿಕ್ಕಿಬಿದ್ದಿದ್ದಾರೆ.
ಹುಬ್ಬಳ್ಳಿಯ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ಬೆನ್ನು ಹತ್ತಿದ ಪೊಲೀಸರು ಹಣ ಪಡೆಯುವಾಗಲೇ ಆರೋಪಿಗಳ ಬಂಧನ ಮಾಡಿದ್ದಾರೆ. ಗದಗ ಮೂಲದ ಮಂಜುನಾಥ ಹದ್ದಣ್ಣನವರು, ಮುಂಡಗೋಡ ಮೂಲದ ವೀರೇಶ್ ಲಿಂಗದಾಳ, ಮಹಾದೇವ ಲಿಂಗದಾಳ ಬಂಧಿತ ಆರೋಪಿಗಳು. ಇನ್ನು ನಾಲ್ಕು ಜನ ಆರೋಪಿಗಳು ಶಾಮೀಲಾಗಿರುವ ಶಂಕೆ ಇದ್ದು ಬಂಧನಕ್ಕೆ ಪೊಲೀಸರ ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author