ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ನಿಧನ…

Share to all

ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ನಿಧನ…

ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ..ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

ಕಳೆದ 15 ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕರು..ಶ್ವಾಸಕೋಶದ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿ‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

ಶ್ವಾಸಕೋಶ ಸಮಸ್ಯೆ ಹಾಗೂ ಅಸ್ತಮಾ (ದಮ್ಮು) ನಿಂದ ಬಳಲುತ್ತಿರುವ ಮೇಟಿ.ಅಪೋಲೋ ಆಸ್ಪತ್ರೆಯ (ಐಸಿಯು) ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ
ದಿನದಿಂದ ದಿನಕ್ಕೆ ಶಾಸಕ ಮೇಟಿ ತೀವ್ರ ಆರೋಗ್ಯ ಕ್ಷೀಣಿಸ್ತಿರೋದಕ್ಕೆ ಚಿಕಿತ್ಸೆ ಗೆ ಸ್ಪಂದನ ನೀಡದೆ ಹಿನ್ನೆಲೆ ಮೃತ ಪಟ್ಟಿದ್ದಾರೆ.

ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ, ಸಚಿವ ತಿಮ್ಮಾಪೂರ ಅಪೋಲೊ ಆಸ್ಪತ್ರೆಗೆ ತೆರಳಿ,ತೀವ್ರ ಆರೋಗ್ಯದ ಕುರಿತು ವೈದ್ಯರೊಂದಿಗೆ ಚರ್ಚೆ ನಡೆಸಿ, ಶಾಸಕ ಮೇಟಿ ಅವ್ರ ಯೋಗಕ್ಷೇಮ ವಿಚಾರಿಸಿದ್ರು.

ಆದ್ರೆ ಇಂದು ಬೆಳಗಿನ ಜಾವ ಸ್ವಲ್ಪ ಪ್ರಮಾಣದ ಆರೋಗ್ಯದಲ್ಲಿ ಏರು ಪೇರಾಗಿದ್ದು, ಶಾಸಕ ಮೇಟಿ ಅವ್ರನ್ನ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು..

ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮದವರಾಗಿರುವ ಶಾಸಕ ಎಚ್ ವೈ ಮೇಟಿ.ರಾಜ್ಯ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಣೆ.ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಶಾಸಕ ಎಚ್.ವೈ ಮೇಟಿ ಗುರುತಿಸಿಕೊಂಡಿದ್ದರು.

ಉದಯ ವಾರ್ತೆ


Share to all

You May Also Like

More From Author