ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹೆಸರಿನಲ್ಲಿ ಆ ಒಂದು ದಂಧೆಗೆ ಸುಮಾರು ವರ್ಷಗಳಿಂದ ಹಣ ವಸೂಲಿ ಮಾಡುತ್ತಾ ವಿಜಯ ಪತಾಕಿ ಹಾರಿಸುತ್ತಿದ್ದರೆ ಅಸಂತೋಷದಿಂದ ಗೊತ್ತಿದ್ದರೂ ಅವರು ಆ ದಂಧೆಗೆ ಕಡಿವಾಣ ಹಾಕುತ್ತಿಲ್ಲಾ..
ಕಳೆದ ತಿಂಗಳು 21-06-2025 ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ:- ಶಾಲಿನಿ ರಜನೀಶ ಎಲ್ಲಾ ಇಲಾಖೆಗಳಿಗೂ ಆ ಒಂದು ದಂಧೆಗೆ ಕಟ್ಟುನಿಟ್ಟಿನ ಕ್ರಮಕೈಕೊಂಡು ಹದಿನೈದು ದಿನದೊಳಗೆ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದ್ದರೂ ಸಹ ಸಂಬಂಧಿಸಿದ ಅಧಿಕಾರಿಗಳು ಈವರೆಗೂ ಒಂದೇ ಒಂದು ರೇಡ್ ಮಾಡಿಲ್ಲಾ…
ಖಡಕ್ ಕಮೀಷನರ ಅಂತಲೇ ಹೆಸರು ಮಾಡಿರುವ ಡಾ:- ರುದ್ರೇಶ ಘಾಳಿ ಸಾಹೇಬ್ರೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರವವರು ಯಾರು ? ಅದು ಯಾವ ದಂಧೆಗೆ ಅನ್ನೋದನ್ನು ಪತ್ತೆ ಹಚ್ಚಿ ಕ್ರಮಕೈಕೊಳ್ಳದಿದ್ದರೆ ಪಾಲಿಕೆಯ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗುವುದಂತೂ ಸತ್ಯ.