ಪೈನಾನ್ಸ್ ಕಿರುಕುಳ..ಆತ್ಮಹತ್ಯೆಗೆ ಯತ್ನಿಸಿದ ಯುವಕ..

Share to all

ಪೈನಾನ್ಸ್ ಕಿರುಕುಳ..ಆತ್ಮಹತ್ಯೆಗೆ ಯತ್ನಿಸಿದ ಯುವಕ..ಎಪಿಎಂಸಿ ಪೋಲೀಸರೂ ಗಪ್ ಚುಪ್ ಅಂತೆ..!

ಹುಬ್ಬಳ್ಳಿ:- ಪೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಎಪಿಎಂಸಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ನಗರದ ಮಂಜುನಾಥ ಕರಮಡಿ ಎಂಬಾತ ಪೈನಾನ್ಸ್ ಒಂದರಲ್ಲಿ ಹಣ ತೆಗೆದುಕೊಂಡು ಅಸಲು ಬಡ್ಡಿ ಸಮೇತ ಎರಡು ಪಟ್ಟು ಕಟ್ಟಿದರೂ ಇನ್ನೂ ಹಣ ನೀಡುವಂತೆ ಒತ್ತಾಯ ಹಾಗೂ ರೌಡೀಸಂ ಮಾಡುತ್ತಿದ್ದಾರೆ ಎಂದು ಅವರಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅಮರಗೋಳದ ನಾಲ್ವರು ಕಿರುಕುಳ ನೀಡುತ್ತಿದ್ದಾರೆ ಮತ್ತು ಈ ಹಿಂದೆನೂ ಅವರ ವಿರುದ್ದ ಎಪಿಎಂಸಿ ಪೋಲೀಸ ಠಾಣೆಯಲ್ಲಿ ದೂರು ಕೊಟ್ಟರೂ ಕ್ರಮಕೈಕೊಂಡಿಲ್ಲ ಎಂದು ಮಂಜುನಾಥ ಆರೋಪಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author