ಧಾರವಾಡ ಜಿಲ್ಲೆಯಲ್ಲಿ ಅಕ್ರಮ ದಂಧೆಗಳ ದರ್ಭಾರ..ಎಸ್ ಪಿ ಅವರ ಪ್ರಾಮಾಣಿಕತೆಗೆ ಮಸಿ ಬಳಿದರಾ ಅವರು..!

Share to all

ಧಾರವಾಡ ಜಿಲ್ಲೆಯಲ್ಲಿ ಅಕ್ರಮ ದಂಧೆಗಳ ದರ್ಭಾರ..ಎಸ್ ಪಿ ಅವರ ಪ್ರಾಮಾಣಿಕತೆಗೆ ಮಸಿ ಬಳಿದರಾ ಅವರು..!

ಧಾರವಾಡ:-ಧಾರವಾಡ ಜಿಲ್ಲೆಗೆ ಎಸ್ ಪಿ ಆಗಿ ಗುಂಜನ್ ಆರ್ಯ ಅವರು ಅಧಿಕಾರವಹಿಸಿಕೊಂಡಾಗ ಜೆಲ್ಲೆಯ ಎಲ್ಲಾ ಅವರ ಕೆಳಗಿನ ಪೋಲೀಸ ಅಧಿಕಾರಿಗಳು ಒಂದಷ್ಟು ದಿನ ಅವರ ಟ್ರ್ಯಾಕ್ ರೆಕಾರ್ಡ ಸ್ಟಡಿ ಮಾಡುವ ಯತ್ನ ನಡೆಸಿದರು.

ಆದರೆ ಎಸ್ ಪಿ ಗುಂಜನ್ ಆರ್ಯ ಅವರು ರಾಯಚೂರು..ಚಿಕ್ಕಮಂಗಳೂರ..ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ.. ಅವರ ಬದ್ಧತೆ..ಧೈರ್ಯ.. ಪ್ರಾಮಾಣಿಕತೆ ಮತ್ತು ಅವರ ಇಂಪ್ರೆಸ್ಸಿವ್ ಟ್ರ್ಯಾಕ್ ರೆಕಾಡ್೯ ಕೇಳಿ ಎಲ್ಲರೂ ಒಂದಷ್ಟು ದಿನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು.

ಈಗ ಅವರ ಪ್ರಾಮಾಣಿಕತೆ ಮತ್ತು ಸಬ್ಯತೆಯನ್ನೇ ಬಂಡವಾಳ ಮಾಡಿಕೊಂಡಿರುವ ಜಿಲ್ಲೆಯ ಪೋಲೀಸರು ಎಲ್ಲೆಂದರಲ್ಲಿ ಅಕ್ರಮ ದಂಧೆಗಳಿಗೆ ಲೈಸೆನ್ಸ್ ನೀಡಿದ್ದಾರೆ.ಅಕ್ರಮ ಸರಾಯಿ..ಮಟ್ಕಾ..ಗ್ಯಾಸ್ ರೀಫಿಲ್ಲಿಂಗ್ ಹೀಗೆ ಒಂದಾ ಎರಡಾ ಹಲವಾರು ದಂಧೆಗಳು ಖುಲ್ಲಂ..ಖುಲ್ಲಾ..

ಧೈರ್ಯ..ಸತ್ಯ..ನಿಷ್ಠೆ ಪ್ರಾಮಾಣಿಕತೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ಇಂಪ್ರೆಸ್ಸಿವ್ ಟ್ರ್ಯಾಕ್ ರೆಕಾರ್ಡ ಹೊಂದಿರುವ ಎಸ್ ಪಿ ಸಾಹೇಬ್ರೇ ನಿಮ್ಮ ಟ್ರ್ಯಾಕ್ ರೆಕಾಡ್೯ ಧಾರವಾಡ ಜಿಲ್ಲೆಯಲ್ಲಿ ಒಂದ್ಸಲ ತೋರಿಸದೇ ಹೋದರೆ ನಿಮ್ಮ ಕೆಳಗಿನವರು ಮಾಡದ..ನೋಡದ ಕೆಲಸ ಮಾಡುವುದರಲ್ಲಿ ಸಂದೇಹವೇ ಇಲ್ಲಾ…

ಉದಯ ವಾರ್ತೆ
ಧಾರವಾಡ.


Share to all

You May Also Like

More From Author