ಹುಬ್ಬಳ್ಳಿ:-ಮಗ ಏನೋ ಮಾಡಿದ ಅಂತಾ ತಾಯಿಯನ್ನು ಪೋಲೀಸ ಠಾಣೆಗೆ ತಂದು ಥಳಿಸಿದ್ದು ಅಲ್ಲದೇ ಆಕೆಯ ಬಳಿ ಇರುವ ಹಣ ಹಾಗೂ ಬಂಗಾರವನ್ನು ಪೋಲೀಸರು ಕಸಿದುಕೊಂಡಿದ್ದಾರಂತೆ.
ಹೌದು ಇದು ಧಾರವಾಡ ಜಿಲ್ಲೆಯ ಕುಂದಗೋಳ ಪೋಲೀಸ ಠಾಣೆಯಲ್ಲಿ ನಡೆದ ಘಟನೆ.ಮಗ ಅನ್ಯ ಜಾತಿಯ ಹುಡುಗಿಯೊಂದಿಗೆ ಪರಾರಿಯಾಗಿದ್ದರಿಂದ ಅವನ ತಾಯಿ ಲಕ್ಷ್ಮವ್ವನನ್ನು ಕರೆದುಕೊಂಡು ಬಂದ ಕುಂದಗೋಳ ಪೋಲೀಸರು ಹೊಡೆದಿದ್ದಾರಂತೆ ಹಾಗಂತ ಲಕ್ಷ್ಮವ್ವ ಹೇಳತಾಳೆ ಕೇಳಿ.
ಮಹಿಳಾ ಪೋಲೀಸರ ಜೊತೆ ಪುರುಷ ಪೋಲೀಸರು ಬೆಲ್ಟ್ ತೆಗೆದುಕೊಂಡು ಮಹಿಳೆ ಮೇಲೆ ಅಮಾನವೀಯ ಕೃತ್ಯ ಮೆರೆದಿದ್ದಾರಂತೆ.ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಕೊಡೋ ಕುಂದಗೋಳ ಪೋಲೀಸರಿಗೆ ಖಡಕ್ ಎಸ್ ಪಿ ಸಾಹೇಬ್ರು ಪೋಲೀಸ ಪಾಠ ಮಾಡಲೇಬೇಕಾಗಿದೆ.