ಹುಬ್ಬಳ್ಳಿ:-ಹುಬ್ಬಳ್ಳಿಯ ಗೋಕುಲ ರಸ್ತೆಯ ಮೇನ್ ರೋಡಿನಲ್ಲೇ ಕಣ್ಣಿಗೆ ಕುಕ್ಕುವಂತಿರುವ ತಾರಾ ಎಮರಾಲ್ಡ್ ನಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದ್ದೂ ಅಲ್ಲದೇ ಆ ಅಕ್ರಮ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಕೂಡಾ ನಡೀತಾ ಇದೆ..
ಕಣ್ಣಿಗೆ ಕಾಣುವಂತೆ..ಕಿವಿಗೆ ಕೇಳುವಂತ್ತಿದ್ದರೂ ಪೋಲೀಸ ಮತ್ತು ಪಾಲಿಕೆ ಕಣ್ಣಿದ್ದು ಕುರುಡರಂತೆ ವರ್ತಿಸುವ ಆ ಎರಡು ಇಲಾಖೆ ಅಲ್ಲಿಂದ ಪಡೆದ ಪ್ರಸಾದವಾದರೂ ಎಷ್ಟು ಅನ್ನೋ ಪ್ರಶ್ನೆ ಮೂಡುತ್ತಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಂತೂ ಒಂದಲ್ಲಾ ಎರಡು ನೋಟೀಸ ಕೊಟ್ಟು ಕೂಡಲೇ ಆ ನಾಲ್ಕನೇ ಮಹಡಿಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿ ಎಷ್ಟೋ ವರ್ಷಗಳು ಕಳೆದಿವೆ.ಮುಂದೆ ಯಾವುದೇ ಕ್ರಮ ಇಲ್ಲಾ..ಅಲ್ಲದೇ ಪೋಲೀಸರಂತೂ ಈ ಕಟ್ಟಡದ ಸುದ್ದಿಗೂ ಹೋಗೋದಿಲ್ಲಾ.ಉಷಾಬರಿಗೂ ಹೋಗೋದಿಲ್ಲಾ..ಇದರ ಅರ್ಥ ಬಿಡಿಸಿ ಹೇಳಬೇಕಿಲ್ಲಾ..