ಹುಬ್ಬಳ್ಳಿ:-ಹಳೇಹುಬ್ಬಳ್ಳಿ ಪೋಲೀಸರು ಪಡಿತರ ಅಕ್ಕಿಯ ಕಂಟೇನರ್ ಗಾಡಿ ಸೀಜ್ ಮಾಡಿ ಹನ್ನೆರಡು ದಿನ ಕಳೆದರೂ ಅಕ್ಕಿಯ ಕಿಂಗ್ ಪಿನ್ MK ಸರಕಾರ ಮೇಲೆ ಈವರೆಗೂ ದೂರು ದಾಖಲಾಗಿಲ್ಲಾ.ಈಗ ಬಂಕಾಪುರದ ಪಡಿತರ ಅಕ್ಕಿ ಕಿಂಗ್ ಪಿನ್ MK ಸರಕಾರ ಎಲ್ಲಿ ಅನ್ನೋ ಪ್ರಶ್ನೆ ಎದ್ದಿದೆ.
ಸಣ್ಣ ಸಣ್ಣ ಪ್ರಕರಣದಲ್ಲಿ ಹತ್ತಾರು ಮಂದಿ ಎತ್ತಾಕಿಗೊಂಡು ಬರುವ ಪೋಲೀಸರಿಗೆ ಈ ಅಕ್ಕಿ ಪ್ರಕರಣದಲ್ಲಿ ಏನಾಗಿದೆ ಅನ್ನೋದು ಮಾತ್ರ ಸಸ್ಪೆನ್ಸ್.ಈ ಹಿಂದೆ ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಅನ್ನಭಾಗ್ಯ ಅಕ್ಕಿ ಸೀಜ್ ಪ್ರಕರಣದಲ್ಲಿ ಕಿಂಗ್ ಪಿನ್ ಸೇರಿ ಹಲವರನ್ನು ಜೈಲಿಗೆ ಅಟ್ಟಿದ್ದರು.ಆದರೆ ಹಳೇಹುಬ್ಬಳ್ಳಿ ಪೋಲೀಸರು ಈ ಪ್ರಕರಣದಲ್ಲಿ ಸಿಚ್ಡ್ ಆಪ್ ಆಗಿದ್ದು ಯಾಕೆ..?
ಬಂಕಾಪುರದ MK ಸರಕಾರ ಹುಬ್ಬಳ್ಳಿಗೆ ಬಂದು ಹೋದರಾ..? ಹೌದು ಎನ್ನುತ್ತಿವೆ ಹಳೇಹುಬ್ಬಳ್ಳಿ ಪೋಲೀಸ ಠಾಣಾ ಗೋಡೆಗಳು.ಅಕ್ಕಿ ರೇಡ್ ಆದಾಗ ಮದ್ಯ ರಾತ್ರಿವರೆಗೂ MK ಸರಕಾರ TAR ಗಾಡಿ ಅಲ್ಲಿಯೇ ಇದ್ದರೂ ಪೋಲೀಸರು ಗಪ್ ಚುಪ್ ಆಗಿದ್ದೇಕೆ.
ಬಡವರ ಹೊಟ್ಟೆ ಸೇರಬೇಕಾದ ಅನ್ನ ಬಾಗ್ಯದಲ್ಲಿ ಪೋಲೀಸರ ನಿರಾಸಕ್ತಿವಹಿಸಿದರಾ ಅಥವಾ ಸವಣೂರಿನಿಂದ ಹುಬ್ಬಳ್ಳಿಗೆ ಪೋನ್ ಬಂದಿದ್ದು ಯಾರಿಗೆ? ಹುಬ್ಬಳ್ಳಿಯವರು ಪೋಲೀಸರ ಮೇಲೆ ಒತ್ತಡ ಹಾಕಿದರವರು ಯಾರು..? ಕಮೀಷನರ್ ಅವರು ಬೆಂಡಿಗೇರಿ ಅಕ್ಕಿ ಪ್ರಕರಣದಂತೆ ಇದನ್ನೂ ತನಿಖೆ ಮಾಡಿ ಅಂದವರು ಸುಮ್ಮನಾಗಿದ್ದೇಕೆ..? ಇವೆಲ್ಲವಕ್ಕೂ ಉತ್ತರವನ್ನ ಪೋಲೀಸರು ಕೊಡಬೇಕಾಗುತ್ತೆ.
ಚಾಲಕ ಇಕ್ಬಾಲ್ ಮದರ ವಿಚಾರಣೆ ವೇಳೆ ಬಾಯಬಿಟ್ಟ ಸತ್ಯ ಸತ್ತು ಹೋಯಿತಾ..ಹುಬ್ಬಳ್ಳಿಯಿಂದ ಬಂಕಾಪುರಕ್ಕೆ ಹೋದ ಹಳೇಹುಬ್ಬಳ್ಳಿ ಪೋಲೀಸರು ತಂದ ಸಿಸಿಟಿವಿ ಎವಿಡೆನ್ಸ್ ನಲ್ಲಿ ಇರೋದಾದರೂ ಏನು? ವೀಕ್ಷಿಸಿ ಉದಯ ವಾರ್ತೆಯಲ್ಲಿ.