*ಪಂಚ ಗ್ಯಾರಂಟಿ ಯೋಜನೆ:*
*ಜನಸಾಮಾನ್ಯರ ಬದುಕಿನಲ್ಲಿ ಅಸಾಮಾನ್ಯ ಬದಲಾವಣೆ*
*ಗೃಹ ಲಕ್ಷ್ಮಿ ಯೋಜನೆಯ ೨೫ನೇ ಕಂತು ಬಿಡುಗಡೆ; 1.2 ಕೋಟಿಗೂ ಹೆಚ್ಚು ಗೃಹಲಕ್ಷ್ಮಿಯರ ಖಾತೆಗೆ ಒಟ್ಟು₹50,000 ಜಮೆ*
*ಇಂದಿನಿಂದ ಒಂದು ತಿಂಗಳು ಹುಬ್ಬಳ್ಳಿಯಲ್ಲಿ ನುಡಿದಂತೆ ನಡೆದ ಕಾಂಗ್ರೆಸ್ ಯಾತ್ರೆ*
ಹುಬ್ಬಳ್ಳಿ – ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಅಸಾಮಾನ್ಯ ಬದಲಾವಣೆ ತಂದಿವೆ; ವಿಪಕ್ಷಗಳ ಕಟ್ಟುಕತೆಗಳೆನ್ನೆಲ್ಲ ಧ್ವಂಸಗೊಳಿಸಿವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ವಿರೋಧಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.
2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ʻಪಂಚ ಗ್ಯಾರಂಟಿʼ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸಿದೆ. ರಾಜ್ಯದ ಜನರಿಗೆ ಒಂದಲ್ಲ ಒಂದು ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ತಲುಪುವಂತೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮರ್ಥ ನಾಯಕತ್ವದ ಸರ್ಕಾರ ಯಾವುದೇ ಧರ್ಮ, ಜಾತಿ ನೋಡಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲ ಜನರಿಗೂ ತಲುಪುತ್ತಿದ್ದು, ನುಡಿದಂತೆ ನಡೆಯುತ್ತಿರುವ ಸರ್ಕಾರವಾಗಿದೆ. ಮತ್ತಷ್ಟು ಜನೋಪಯೋಗಿ ಯೋಜನೆಗಳನ್ನು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
*ಜನರ ಬದುಕಿಗೆ ಬಲ*
ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಬಡ ಕುಟುಂಬಗಳಿಗೆ ಆಹಾರ ಭದ್ರತೆ ಮತ್ತು ವಿದ್ಯುತ್ ಸಬ್ಸಿಡಿ ಮೂಲಕ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿವೆ. ಶೇ.90ಕ್ಕೂ ಹೆಚ್ಚು ಮಹಿಳೆಯರು ಆರ್ಥಿಕ ಭದ್ರತೆ ಮತ್ತು ಉಳಿತಾಯದ ಪ್ರಯೋಜನೆ ಪಡೆದಿದ್ದಾರೆ. 1.2 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ. ಇದನ್ನು ವಿಪಕ್ಷದವರು ಮನಗಾಣಬೇಕು ಎಂದಿದ್ದಾರೆ.
ವಿಶೇಷವಾಗಿ ಗೃಹಲಕ್ಷ್ಮೀ ಯೋಜನೆಯ ಮೂಲಕ ಇಂದು ಪ್ರತಿ ಕುಟುಂಬದ ಯಜಮಾನಿಯರ ಖಾತೆಗೆ ಬರೋಬ್ಬರಿ 50 ಸಾವಿರ ರೂಪಾಯಿ ಜಮೆ ಆಗಿದೆ. ಈ ಹಣ ಸಾಮಾನ್ಯ ಮೊತ್ತವೇ? ಇದು ಕೇವಲ ಹಣವಲ್ಲ; ಪ್ರತಿಯೊಬ್ಬ ಗೃಹಿಣಿಯವರ ಆತ್ಮಗೌರವ ಮತ್ತು ಸಬಲೀಕರಣದ ಸಂಕೇತ.
*ಬಡವರ ಬದುಕಿಗೆ ಆಸರೆಯ ಸರ್ಕಾರ*
ಹುಬ್ಬಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಓಡಾಡುವಾಗ ತಾಯಂದಿರರು, ಗೃಹಲಕ್ಷ್ಮೀ ಹಣದಿಂದ ಮನೆಯ ಸಣ್ಣಪುಟ್ಟ ಸಾಲ ತೀರಿದೆ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ಟಿವಿ, ಫ್ರೀಡ್ಜ್ ಕೊಂಡುಕೊಂಡೆ ಎಂದೆಲ್ಲ ಕಣ್ಣೀರು ತುಂಬಿ ಹೇಳುವಾಗ ಹೆಮ್ಮೆ ಎನಿಸುತ್ತದೆ. ʼನಮ್ಮ ಕಾಂಗ್ರೆಸ್ ಸರ್ಕಾರ ಹಸಿದವರ ಹೊಟ್ಟೆ ತುಂಬಿಸುವ, ಬಡವರ ಬದುಕಿಗೆ ಆಸರೆಯಾಗುವ ಸರ್ಕಾರ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ʼಕೆಲಸಗಳು ಉಳಿಯುತ್ತವೆ ಟೀಕೆಗಳು ಸಾಯುತ್ತವೆʼ ಎಂಬುವುದಕ್ಕೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಸಾಕ್ಷಿ. ಮೊದಲಿಗೆ ಈ ಯೋಜನೆಗಳನ್ನು ವಿರೋಧ ಪಕ್ಷಗಳು ಟೀಕಿಸಿದವು. ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದ ನಂತರ ಈ ಯೋಜನೆಗಳನ್ನೇ ವಿರೋಧ ಪಕ್ಷಗಳು ಅನುಸರಿಸಿದವು. ವಿರೋಧ ಪಕ್ಷಗಳು ನೀಡಿದ ಭರವಸೆಯಂತೆ 15 ಲಕ್ಷ ರೂಪಾಯಿ ಹಣ ಯಾರದ್ದಾದರೂ ಖಾತೆಗೆ ಬಂದಿದೆಯೇ? ಇಂಧನ ಬೆಲೆಗಳು ಇಳಿಕೆಯಾಗಿದ್ದವಾ? ಎಂದು ಪ್ರಶ್ನಿಸಿದ ಅವರು, ʼನಮ್ಮದು ನುಡಿದಂತೆ ನಡೆದ ಸರ್ಕಾರʼ ಎಂದಿದ್ದಾರೆ.
*ತಲಾ ಆದಾಯದಲ್ಲೂ ಕರ್ನಾಟಕ ಮುಂದು*
ಬಿಜೆಪಿ ಜನರ ಭಾವನೆಗಳೊಂದಿಗೆ ಆಟವಾಡುತ್ತದೆ. ನಾವು ಜನರಿಗೆ ಅರ್ಥಪೂರ್ಣ ಜೀವನವನ್ನು ಒದಗಿಸಲು ಶ್ರಮಿಸುತ್ತಿದ್ದೇವೆ. ಹಣವನ್ನು ತಿರುಗಿಸಿದಾಗ, ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ಜಿಎಸ್ಟಿ ಸಂಗ್ರಹವು ಹೆಚ್ಚಾಗುತ್ತಿದೆ. ಕರ್ನಾಟಕವು ಇಡೀ ದೇಶದಲ್ಲಿ ತಲಾ ಆದಾಯದಲ್ಲಿ ಅಗ್ರಸ್ಥಾನದಲ್ಲಿದೆ, ಇದಕ್ಕೆ ಗ್ಯಾರಂಟಿ ಯೋಜನೆಗಳು ಸಹ ಕಾರಣವೆಂದು ಹೇಳಬಹುದು. ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರವು ವಿಭಿನ್ನ ಹೆಸರುಗಳಲ್ಲಿ ಇಂತಹ ಯೋಜನೆಗಳನ್ನು ಪ್ರಾರಂಭಿಸಿದವು ಎಂದು ರಜತ್ ಉಳ್ಳಾಗಡ್ಡಿ ಮಠ ಹೇಳಿದ್ಧಾರೆ.
*ಭೈರೆದೇವರಕೊಪ್ಪದಲ್ಲಿ ನುಡಿದಂತೆ ನಡೆದ ಕಾಂಗ್ರೆಸ್ ಯಾತ್ರೆ*
ನಾಳೆ ರವಿವಾರ ದಿ. 01.02.2026 ದಂದು ಸಂಜೆ 5.00 ಗಂಟೆಗೆ ಭೈರಿದೇವರಕೊಪ್ಪದ ಶಿವಾನಂದಮಠ ದಿಂದ ರೇಣುಕನಗರದ ಮೈಲಾರಲಿಂಗೇಶ್ವರ ದೇವಸ್ಥಾನದವರಿಗೆ *ಶ್ರೀ ರಜತ್ ಉಳ್ಳಾಗಡ್ಡಿಮಠ* ಇವರ ನೇತೃತ್ವದಲ್ಲಿ *ನುಡಿದಂತೆ ನಡೆದ ಕಾಂಗ್ರೆಸ್ ಯಾತ್ರೆ* ಆಯೋಜಿಸಲಾಗಿದೆ ಕಾರಣ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಕಿ ಕೋರಲಾಗಿದೆ.
ಒಂದು ತಿಂಗಳ ಕಾಲ ನಡೆಯುವ ಈ ಯಾತ್ರೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ 50,000 ಮನೆಗಳಿಗೆ ತಲುಪಲಿದೆ, ಮುಖಂಡರು, ಪಾಲಿಕೆ ಸದಸ್ಯರು ಸಾಥ್ ನೀಡಲಿದ್ದಾರೆ.
ಉದಯ ವಾರ್ತೆ
ಹುಬ್ಬಳ್ಳಿ