ಪಾಲಿಕೆಯ ಜೋನ್ ನಾಲ್ಕರಲ್ಲಿ..ಆರಡಿಯ ಅಧಿಕಾರಿಯದೇ ಕಾರುಬಾರು..ಆ ಅಧಿಕಾರಿ ವಿರುದ್ಧ ಜನರ ಆಕ್ರೋಶ…

Share to all

ಪಾಲಿಕೆಯ ಜೋನ್ ನಾಲ್ಕರಲ್ಲಿ..ಆರಡಿಯ ಅಧಿಕಾರಿಯದೇ ಕಾರುಬಾರು..ಆ ಅಧಿಕಾರಿ ವಿರುದ್ಧ ಜನರ ಆಕ್ರೋಶ…

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಛೇರಿ ನಾಲ್ಕರಲ್ಲಿ ಆರಡಿಯ ಪ್ರಮೋಷನ್ ಅಧಿಕಾರದೇ ಕಾರುಬಾರು..ಅಲ್ಲಿ ಜೋನಲ್ ಕಮೀಷನರೂ ಅವನೇ ಆ ಅಧಿಕಾರಿಯೂ ಅವನೇ..ಆ ಆರಡಿಯ ಅಧಿಕಾರಿಯ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ…

ಆ ಕಛೇರಿಯಲ್ಲಿ ಇ ಸ್ವತ್ತು ಅನುಮೋದನೆ..ತಿದ್ದುಪಡೆ ಅರ್ಜಿಗಳ ಅಪ್ರೂವಲ್..ಖಾತಾ ಬದಲಾವಣೆ..ಸೇರಿದಂತೆ ಒಂದಲ್ಲಾ..ಎರಡಲ್ಲಾ..ಜನರು ಏನೇ ತೆಗೆದುಕೊಂಡು ಹೋದ್ರೂ ಅದರಲ್ಲಿ ಆರಡಿ ಅಧಿಕಾರಿ ಹುಡುಕೋದು ಸಾವಿರ..ಸಾವಿರ ಲೆಕ್ಕವನ್ನು.

ಅಷ್ಟೇ ಅಲ್ಲದೇ ಕರ ವಸೂಲಿಗಾರರ ಕಿರಿ ಕಿರಿಗಂತೂ ಸಾರ್ವಜನಿಕರು ರೋಷಿ ಹೋಗಿದ್ದಾರೆ..ಖಡಕ್ ಕಮೀಷನರ್ ಸಾಹೇಬ್ರು ಆ ಆರಡಿಯ ಪ್ರಮೋಷನ್ ಅಧಿಕಾರಿಯ ಮೇಲೆ ಒಂದು ಕಣ್ಣಿಟ್ಟರೆ ಗೊತ್ತಾಗುತ್ತೆ ನಿಜ ಬಣ್ಣ..ಈ ಹಿಂದೆ ಆ ಆರಡಿಯ ಅಧಿಕಾರಿ ಪ್ರಮೋಷನ್ ಆಗುವುದೇ ತಡ ಜೋನಲ್ ಕಮೀಷನರ್ ಮಾಡಲು ಎಲ್ಲಿಲ್ಲದವರ ಕಡೆಯಿಂದ ಪೋನ್ ಮಾಡಿಸಿದ್ದರಂತೆ..ಆದರೆ ಕಮೀಷನರ ಅವರು ಅವರ ಜಾಣ್ಮೆಯಿಂದ ಉಗಿದು ಕಳಿಸಿದ್ದರಂತೆ..

ಈಗ ಆ ಪೋಸ್ಟ ಕೊಟ್ಟಿದ್ದಕ್ಕೆ ಇಷ್ಟೊಂದು ಮಂಗ್ಯಾನ ಆಡೋ ಆರಡಿ ಅಧಿಕಾರಿಗೆ ಜೋನಲ್ ಕಮೀಷನರ್ ಅಂತಾ ಕೊಟ್ಟಿದ್ದರೆ ಮುಗಿದೇ ಹೋಗಿತ್ತು..ಇಂತಹ ಅಧಿಕಾರ ವಿರುದ್ಧ ಜನರೇ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಜೋನಲ್ ಕಮೀಷನರ್ ಹುದ್ದೆಗೆ ಅರ್ಹತೆ ಇಲ್ಲದಿದ್ದರೂ ಬನಶಂಕರಿ ಜಾತ್ರೆಯಲ್ಲಿ ಬಂಡಾರ ಹಚ್ಚಿಕೊಂಡು ವಲಯ ಆಯುಕ್ತರ ಹುದ್ದೆಯಲ್ಲಿ‌ ಕುಳಿತಿರುವ ಜೋನಲ್ ಕಮೀಷನರ ಅವರೇ ನಿಮ್ಮ ಬಾಗಿಲಿಗೆ ಜನ ಬಂದು ಪ್ರತಿಭಟನೆ ಮಾಡತಾರೆಂದರೆ ಏನ್ರೀ ಸಾಹೇಬ್ರೇ ನಿಮ್ಮ ಆಡಳಿತ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author