ಹತ್ತೂರಿಗೆ ನ್ಯಾಯಾ ಹೇಳುವವನೇ ದಾರಿ ತಪ್ಪಿದನಾ…ದಾರಿ ತಪ್ಪಿದ ಮಾಜಿ ಶಾಸಕನ ಮಗ ಮಟಾಷ್…

Share to all

ಹತ್ತೂರಿಗೆ ನ್ಯಾಯಾ ಹೇಳುವವನೇ ದಾರಿ ತಪ್ಪಿದನಾ…ದಾರಿ ತಪ್ಪಿದ ಮಾಜಿ ಶಾಸಕನ ಮಗ ಮಟಾಷ್…

ಧಾರವಾಡ:-ಧಾರವಾಡದ ದಟ್ಟ ಅರಣ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಾಜಿ ಶಾಸಕನ ಪುತ್ರನ ಶವ ಪತ್ತೆ ಪ್ರಕರಣಕ್ಕೆ ಟ್ವಿಷ್ಟ ಸಿಕ್ಕಿದೆ.
ಮಾಜಿ ಶಾಸಕನ ಪುತ್ರನ ಹತ್ಯೆಯಲ್ಲಿ ಹೆಣ್ಣಿನ ಬಳೆ ಸದ್ದು ಮಾಡಿದ್ದು ಪ್ರಕರಣ ನಡೆದು ಹನ್ನೆರಡು ಘಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸರು ಸಕ್ಸಸ್ ಆಗಿದ್ದಾರೆ.

https://youtu.be/KiYX6Wd2dUc?si=4dazBqwDDxb5-4FX

ಹೆಣ್ಣಿನ ಚಟಕ್ಕೆ ಬಿದ್ದು ಮಾಜಿ ಶಾಸಕನ ಮಗ ಚಟ್ಟ ಕಟ್ಟಿಸಿಕೊಂಡಿದ್ದಾನೆ. ಪೋಲೀಸರ ತನಿಖೆಯಿಂದ ಬಹಿರಂಗಗೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಪೋಲೀಸರು ಆರೆಸ್ಟ್ ಮಾಡಿದ್ದಾರೆ.

ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದಲೇ ಸುಟ್ಟು ಹಾಕಲಾಗಿದ್ದ ಪ್ರಕರಣವನ್ನ ಚಾಣಾಕ್ಷತನದಿಂದ ಹೊರತೆಗೆಯುವುದರಲ್ಲಿ ಸಫಲರಾಗಿದ್ದು, ಧಾರವಾಡ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ಸೇರಿದಂತೆ ಗರಗ ಠಾಣೆಯ ಇನ್ಸಪೆಕ್ಟರ್ ಶಿವಯೋಗಿ ಲೋಹಾರ ತಂಡ ಆರೋಪಿಗಳನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶ ಸಾಧಿಸಿದ್ದಸರೆ.

ಪ್ರಕರಣದಲ್ಲಿ “ಅವಳಾಟ” ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದ್ದು, ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರು ಅಧಿಕೃತ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author