ಹಾಡುಹಗಲೇ ಪತ್ನಿಯ ಕತ್ತು ಸೀಳಿ…ಕಾರು ಹಾಯಿಸಿ ಲೈವ್ ಮಡ್೯ರ್…ಭೀಕರ ಹತ್ಯೆಗೆ ಬೆಚ್ಚಿ ಬಿದ್ದ ಜನ..

Share to all

ಹಾಡುಹಗಲೇ ಪತ್ನಿಯ ಕತ್ತು ಸೀಳಿ…ಕಾರು ಹಾಯಿಸಿ ಲೈವ್ ಮಡ್೯ರ್…ಭೀಕರ ಹತ್ಯೆಗೆ ಬೆಚ್ಚಿ ಬಿದ್ದ ಜನ..

ಕಲಬುರ್ಗಿ:-ದೇವರ ದರ್ಶನ ಮಾಡಿಕೊಂಡು ಬರೋಣ ಅಂತಾ ಪತ್ನಿಯನ್ನು ಕಾರಿನಲ್ಲಿ ಕರೆದುಕೊಂಡು ಬಂದ ಪತಿ ಅವಳ ಕತ್ತನ್ನು ಕೊಯ್ದು,ಕಾರು ಹಾಯಿಸಿ ಭೀಕರವಾಗಿ ಕೊಲೆ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆಯ ಬಳ್ಳೂರ್ಗಿ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರಾ ಮೂಲದ ಶೈಲಾ ಎಂಬುವಳನ್ನು ಅವಳ ಪತಿ ಅಕ್ಷಯ ಎಂಬಾತ ಅವಳ ಅನೈತಿಕ ಸಂಬಂಧಕ್ಕೆ ರೋಸಿ ಹೋಗಿ ಮಟ..ಮಟ ಮದ್ಯಾಹ್ನವೇ ಅವಳ ಕತ್ತು ಸೀಳಿ ಕಾರು ಹಾಯಿಸಿ ರಾಕ್ಷಸಿ ಕೃತ್ಯ ಮೆರೆದಿದ್ದಾನೆ.

ಕತ್ತು ಸೀಳುತ್ತಿದ್ದಂತೆ ಪತಿಯಿಂದ ತಪ್ಪಿಸಿಕೊಂಡು ಹೋಗಿ ಜಮೀನಿನಲ್ಲಿ‌ ಒದ್ದಾಡುತ್ತಿದ್ದ ಪತ್ನಿಯನ್ನು ನೋಡಿದ ಪತಿ. ಮತ್ತೆ ಕಾರಿನಿಂದ ಅವಳ ಮೇಲೆ ಮೂರ್ನಾಲ್ಕು ಸಲ ಹಾಯಿಸಿ,ಅವಳು ಸತ್ತಿರುವುದನ್ನು ಕನ್ಪರ್ಮ ಮಾಡಿಕೊಂಡು ಅಲ್ಲಿಂದ ಕಾಲಕಿತ್ತಿದ್ದಾನೆ.ಇದೆಲ್ಲಾ ವಿಡಿಯೋ ಸ್ಥಳೀಯರು ಮೋಬೈಲನಲ್ಲಿ‌ ರೆಕಾರ್ಡಿಂಗ್ ಮಾಡಿದ್ದಾರೆ.

ಉದಯ ವಾರ್ತೆ
ಕಲಬುರಗಿ.


Share to all

You May Also Like

More From Author