ಪಾಲಿಕೆ ಕಮೀಷನರ ಎದುರೇ ಎಲ್ ಆ್ಯಂಡ್ ಟಿ ಅಧಿಕಾರಿಗಳ ತರಾಟೆ..ವಾಡ್೯ಗೆ ಹೋದರೆ ಜನರು ಕಾಲನ್ನವು ಕೈಯಾಗ ಹಿಡಿತಾರೆ.
ಧಾರವಾಡ:- ಜನರಿಗೆ ಸಮರ್ಪಕವಾಗಿ ನೀರು ಕೊಡದ ಎಲ್ ಆ್ಯಂಡ್ ಟಿ ಎಂಡಿ ಹರಿಪ್ರಸಾದ ಅವರನ್ನು ಪಾಲಿಕೆಯ ಸದಸ್ಯರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ನಾವು ವಾಡ್೯ಗೆ ಹೋದರೆ ಜನರು ಕಾಲನ್ನವು ಕೈಯಾಗ ತೊಗೊಂಡು ಹೊಡೀತಾರೆ.ನೀವು ಕೆಲಸ ಮಾಡೋದು ಬ್ಯಾಡ ನಮ್ಮ ಕಮೀಷನರ್ ಮಾಡತಾರೆ ನೀವು ಇಲ್ಲಿಂದ ಜಾಗಾ ಕಾಲಿ ಮಾಡಿ ಎಂದು ಪಾಲಿಕೆಯ ಸದಸ್ಯರು ಜಾಡಿಸಿದರು.ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:- ರುದ್ರೇಶ ಘಾಳಿ ಸಮಾಧಾನಪಡಿಸಿ ಪ್ರತಿಭಟನೆ ಮುಕ್ತಾಯಗೊಳಿಸಿದರು.
ಬೆಳೆಗ್ಗೆಯಿಂದಲೇ ಪ್ರತಿಭಟನೆ ಕುಳಿತಿದ್ದ ಪಾಲಿಕೆಯ ಸದಸ್ಯರನ್ನು ತಡವಾಗಿ ಸಮಾಧಾನ ಪಡಿಸಲು ಮುಂದಾದ ಎಲ್ ಆ್ಯಂಡ್ ಟಿ ಎಂಡಿ ಹರಿಪ್ರಸಾದ ಅವರಿಗೆ ತರಾಟೆಗೆ ತೆಗೆದುಕೊಂಡ ಮೇಲೆ ಮಾರ್ಚ 31 ಕ್ಕೆ ನೀರು ಪೋರೈಸುವ ಭರವಸೆ ನೀಡಿದರು.