ಪೋಲೀಸ”112″ ಕರೆ ಮಾಡಿದರೆ ಹುಷಾರ್…ಹಳೇಹುಬ್ಬಳ್ಳಿ ಪೋಲೀಸರು “107” ಮಾಡತಾರೆ…

Share to all

ಪೋಲೀಸ”112″ ಕರೆ ಮಾಡಿದರೆ ಹುಷಾರ್…ಹಳೇಹುಬ್ಬಳ್ಳಿ ಪೋಲೀಸರು “107” ಮಾಡತಾರೆ…

ಹುಬ್ಬಳ್ಳಿ:- ತುರ್ತು ಸೇವೆಗಾಗಿ ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ಜಾರಿಗೊಳಿಸಿದ ಉದ್ದೇಶವನ್ನೇ ಮರೆತರಾ ಪೋಲೀಸರು ಅನ್ನೋ ಅನುಮಾನ ಮೂಡತಾ ಇದೆ.ಕರೆ ನಿಮ್ಮದು ಸೇವೆ ನಮ್ಮದು ಸದಾ ನಿಮ್ಮ ಸೇವೆಯಲ್ಲಿ ಅನ್ನೋ ವಾಕ್ಯ ಮರೆತರಾ ಹಳೇಹುಬ್ಬಳ್ಳಿ ಪೋಲೀಸರು.

ಹೌದು ಕಳೆದ ಐದಾರು ದಿನಗಳ ಹಿಂದೆ ಹಳೇಹುಬ್ಬಳ್ಳಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಎರಡು ಕುಟುಂಬಗಳ ಮದ್ಯೆ ಸಣ್ಣ ಗಲಾಟೆ ನಡೆಯುವಾಗ ಅಲ್ಲಿಯ ಯುವಕನೊಬ್ಬ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು “112” ಗೆ ಕರೆ ಮಾಡತಾನೆ.

ಕರೆ ಮಾಡಿದ ಯುವಕನನ್ನೂ ಪೋಲೀಸ ಠಾಣೆಗೆ ಕರೆಯಿಸಿ ಅವನಿಗೆ ಪೋಲೀಸರು “107” ನೋಟೀಸ್ ಕೊಡತಾರೆ..112 ಗೆ ಕರೆ ಮಾಡಿದವರ ಹೆಸರು ಗೌಪ್ಯವಾಗಿ ಇಡಬೇಕು ಅನ್ನೋ ಕಾಮನ್ ಸೆನ್ಸೂ ಇಲ್ಲದ ಪೋಲೀಸರು ಮತ್ತೆ ನೋಟೀಸ್ ಕೊಡತಾರೆಂದರೆ ಏನರ್ಥ.

ಆ ಯುವಕನಿಗೆ ನೋಟೀಸ್ ಕೊಟ್ಟು ಹೆದರಿಸುವ ತಂತ್ರ ಇದೆ ಅನ್ನೋ ಮಾಹಿತಿ ಇದೆ.ಅದಕ್ಕೆ ಬಲವಾದ ಕಾರಣವೂ ಇದೆ ಎನ್ನಲಾಗಿದೆ.ಆ ನೋಟೀಸ್ ವಿರುದ್ಧ ಆ ಯುವಕ ಕಾನೂನು ಹೋರಾಟಕ್ಕೂ ಸಜ್ಜಾಗಿದ್ದಾನೆ ಎನ್ನಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author