ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೂರು ಅಧಿಕಾರಿಗಳು ಎತ್ತಂಗಡಿ…ರಿಲೀವ್ ಇನ್ನೂ ಇಲ್ಲಾ..

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೂರು ಅಧಿಕಾರಿಗಳು ಎತ್ತಂಗಡಿ…ರಿಲೀವ್ ಇನ್ನೂ ಇಲ್ಲಾ..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇರುವ ಹುದ್ದೆಯನ್ನು ಬಿಟ್ಟು ರಾಜಕೀಯ ಮುಖಂಡರ ಮೂಲಕ ಲಾಬಿ ಮಾಡಿಕೊಂಡು ಹಲವು ವರ್ಷಗಳಿಂದ ಜೋನಲ್ ಕಮೀಷನರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ ತಳವಾರ ಜೋನ್ -6….ಕುಂತಲ್ಲೇ ಆಟವಾಡುವ ಪ್ರಹ್ಲಾದ ರೆಡ್ಡಿ ಹಾಗೂ ನಯನಾ ಕೆ ಎಸ್ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

 

ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಆದರೂ ಸಹ ಅಲ್ಲಿ ಕೆಲಸ ಮಾಡದೇ ಜೋನ್ 6 ಒಂದನ್ನೇ ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದ ಗಿರೀಶ ತಳವಾರ ಅವರು ಕಾರವಾರ ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡಿದ್ದರೆ..ಸಮುದಾಯ ಸಂಘಟನಾಧಿಕಾರಿಯಾಗಿದ್ದರೂ… ಅರ್ಹತೆ ಇಲ್ಲದಿದ್ದರೂ ರಾಜಕೀಯ ಲಾಬಿ ಮಾಡಿ ಜೋನಲ್ ಕಮೀಷನರ್ ಹುದ್ದೆಯನ್ನೇ ಗಿಟ್ಟಿಸಿಕೊಳ್ಳುತ್ತಾ ಬಂದಿದ್ದ ಪ್ರಹ್ಲಾದ ರೆಡ್ಡಿ ಅವರನ್ನ ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆಗೆ ವರ್ಗಾವಣೆ ಆದರೆ ನಯನಾ ಕೆ ಎಸ್ ಅವರನ್ನು ಬಳ್ಳಾರಿ ಜಿಲ್ಲೆಯ ಕುರೇಕೊಪ್ಪಕ್ಕೆ ವರ್ಗಾವಣೆಗಿಂಡಿದ್ದಾರೆ.

ಈ ಮೂವರನ್ನು ಕಮೀಷಬರ್ ಸಾಹೇಬ್ರು ರಿಲೀವ್ ಮಾಡತಾರಾ ಇಲ್ಲಾ ಸೆನ್ಸಸ್ ನೆಪೆ ಹೇಳಿ ಇಲ್ಲೇ ಉಳಿಸಿಕೊಳ್ಳತಾರಾ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author