ಹುಬ್ಬಳ್ಳಿಯಲ್ಲಿ ಮತ್ತೊಂದು ನಡೆಯಿತಾ ಅಮಾನವೀಯ ಕೃತ್ಯ..ಬಟ್ಟೆ ಬಿಚ್ಚಿ ಥಳಿಸಿ ವಿಡಿಯೋ ಮಾಡಿಕೊಂಡ ದಶಕದ ಗೆಳೆಯರು….
ಹುಬ್ಬಳ್ಳಿ:- ಹುಬ್ಬಳ್ಳಿಯ ಕೇಶ್ವಾಪುರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಕಳೆದ ಐದು ದಿನಗಳ ಹಿಂದೆ ವಿಶಾಲ್ ಎಂಬುವರನ್ನು ಐದು ಜನ ಗೆಳೆಯರು ಬತ್೯ಡೇ ಪಾರ್ಟಿಗೆಂದು ಕರೆದುಕೊಂಡು ಹೋಗಿ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಟ್ಟೆ ಬಿಚ್ಚಿ ಥಳಿಸಿದ್ದಲ್ಲದೇ ವಿಡಿಯೋ ಮಾಡಿಕೊಂಡು ಅಮಾನವೀಯ ಕೃತ್ಯ ಮೆರೆದಿದ್ದಾರಂತೆ…
ಐದು ಜನ ಗೆಳೆಯರಾದ ವಿವೇಕ..ಮುಸ್ತಾಕ್..ಸಂದೀಪ..ಶ್ರೀಶೈಲ್..ಶ್ರೀಕಾಂತ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ.ಸುನೀಲ್ ಶೆಟ್ಟಿ ಈ ಕೃತ್ಯ ಮಾಡಿಸಿದ್ದಾನೆ ಅಂತಾ ಐದು ದಿನದ ಹಿಂದೆಯೇ ಹುಬ್ಬಳ್ಳಿಯ ಕೇಶ್ವಾಪುರ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದರೂ ನಾಳೆ..ನಾಡಿದ್ದು ಅಂತಾ ಅವರನ್ನ ಪೋಲೀಸರು ರಕ್ಷಣೆ ಮಾಡತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ.
ಒಂದ ವ್ಯಕ್ತಿಯನ್ನು ಪಾರ್ಟಿ ಅಂತಾ ಕರೆದುಕೊಂಡು ಹೋಗಿ ಬೆತ್ತಲೆ ಮಾಡಿ ಥಳಿಸಿದ ಪ್ರಕರಣವನ್ನು ಕೇಶ್ವಾಪುರ ಪೋಲೀಸರು ಗಂಭೀರವಾಗಿ ಪರಿಗಣಿಸದಿದ್ದರೆ ಹೇಗೆ ಅನ್ನೋ ಪ್ರಶ್ನೆ ಕಾಡತಾ ಇದೆ.