ಧಾರವಾಡ:-ಧಾರವಾಡದಲ್ಲಿ ವಿದ್ಯಾರ್ಥಿ ಸುಸೈಡ್ ಪ್ರಕರಣದಲ್ಲಿ ಯಾರೋ ಎರಡ್ಮೂರ ಮಂದಿ ಕಾನಸ್ಟೇಬಲ್ ಗಳನ್ನ ಸಸ್ಪೆಂಡ್ ಮಾಡಿದರೆ ಅಲ್ಲಾ..ಈ ಪ್ರಕರಣದಲ್ಲಿ ಕಮೀಷನರ್ ಎನ್ ಶಶಿಕುಮಾರ ಅವರ ಮೇಲೆ ಕ್ರಮ ಆಗಬೇಕು.ಒಂದೆರಡ ದಿನದಲ್ಲಿ ಕ್ರಮಕೈಕೊಳ್ಳದಿದ್ದರೆ ಬೀದಿಗಿಳಿದು ಪೋಲೀಸ ಇಲಾಖೆ ವಿರುದ್ದ ಹೋರಾಟ ಮಾಡುವುದಾಗಿ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅನ್ನೋದು ದರೋಡೆಕೋರರ ಬೀಡಾಗಿದೆ.ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಆಪೀಸ ಗೂಂಡಾಗುಳ ಬೀಡಾಗಿದೆ.ಒಬ್ಬಿಬ್ಬರ ಇನಸ್ಪೆಕ್ಟರ್ ಗಳನ್ನ ಇಟ್ಟುಕೊಂಡು ಸೆಟಲ್ ಮೆಂಟ್ ಆಪೀಸ ಮಾಡಿಕೊಂಡಿದ್ದಾರೆ.ನಾಚಿಕೆ ಆಗಬೇಕು ಇವರಿಗೆ ಅಂಥಾ ಪೋಲೀಸ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಈ ವಿದ್ಯಾರ್ಥಿ ಸುಸೈಡ್ ಪ್ರಕರಣವನ್ನ ಸಿಬಿಐ ಗೆ ಕೊಡಿ ಹಾಗೂ ಪೋಲೀಸ ಕಮೀಷನರ್ ಮೇಲೆ ಎರಡು ದಿನದಲ್ಲಿ ಕ್ರಮಕೈಕೊಳ್ಳಿ ಎಂದು ಬೆಲ್ಲದ ಆಗ್ರಹಿಸಿದ್ದಾರೆ.