ಅಪ್ಪ..ಅವ್ವನ ಮಾರಿ ನೋಡಿ ಡ್ಯೂಟಿಗೆ ಹೋಗತೇನಿ ಅಂದ ಜೈಲರ್..ಸೀದಾ ಶಿವನ ಪಾದ ಸೇರಿದ…

Share to all

ಅಪ್ಪ..ಅವ್ವನ ಮಾರಿ ನೋಡಿ ಡ್ಯೂಟಿಗೆ ಹೋಗತೇನಿ ಅಂದ ಜೈಲರ್..ಸೀದಾ ಶಿವನ ಪಾದ ಸೇರಿದ…

ಧಾರವಾಡ:-ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಆಗಿದ್ದ ಸಿದ್ದರಾಮಪ್ಪ ಸಸ್ಪೆಂಡ್ ಆಗಿದ್ದಕ್ಕೆ ಹೆದರಿ ನೇಣಿಗೆ ಶರಣಾದ ಘಟನೆ ಧಾರವಾಡದಲ್ಲಿ ನಡೆದಿದೆ..

ಕಳೆದ ಎರಡು ತಿಂಗಳ ಹಿಂದೆ ಧಾರವಾಡ ಸಬ್ ಜೈಲಿನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆದ ಹಿನ್ನೆಲೆಯಲ್ಲಿ ಜೈಲರ್ ಸಿದ್ದರಾಮಪ್ಪ ಅವರನ್ನು ಅಲೋಕುಮಾರ ಅವರ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದರು.

ಆ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿದ್ದ ಸಿದ್ದರಾಮಪ್ಪ ಕಾರಾಗೃಹದ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಸ್ಪೆಂಡ ನಂತರ ಮೈಸೂರಿಗೆ ವರ್ಗಾವಣೆಗೊಂಡಿದ್ದ ಸಿದ್ಧರಾಮಪ್ಪ ಇಂದು ಮೈಸೂರಿಗೆ ಹೋಗಿ‌ ಹಾಜರಾಗಬೇಕಿತ್ತು.ಅಪ್ಪ..ಅವ್ವನ್ನ ನೋಡಿ ಹೋಗತೇನಿ ಅಂತಾ ಮನೆಯಲ್ಲಿ ಹೇಳಿದ್ದನಂತೆ..ಆದರೆ ತಂದೆ ತಾಯಿ ಮುಖ ನೋಡಿ ಸೀದಾ ಶಿವನ ಪಾದ ಸೇರಿದ್ದಾನೆ.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author