ಖಡಕ್ ಐಪಿಎಸ್ ಅಧಿಕಾರಿ ಲಾಭೂರಾಮ್ ಇನ್ಮುಂದೆ ಹೋಮ್ ಮಿನಿಸ್ಟರ್ ವಿಶೇಷ ಅಧಿಕಾರಿ…ರಾಜ್ಯದ ಇತಿಹಾಸದಲ್ಲಿ ಮೊದಲು..
ಬೆಂಗಳೂರು:- ಕರ್ನಾಟಕ ಪೋಲೀಸ ಇಲಾಖೆಯಲ್ಲಿ ನಿಯೋಜನೆ ನಿರೀಕ್ಷೆಯಲ್ಲಿದ್ದ ಐಪಿಎಸ್ ಅಧಿಕಾರಿ ಲಾಭೂರಾಮ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೂತನ ಹುದ್ದೆಯನ್ನು ನೀಡಲಾಗಿದೆ.ಬೆಂಗಳೂರಿನ ಕಂಪ್ಯೂಟರ್ ವಿಭಾಗದ ಐಜಿಪಿ ಆಗಿ ಅವರನ್ನು ನೇಮಿಸಲಾಗಿದೆ.
ರಾಜ್ಯ ಸರಕಾರದ ಈ ಆದೇಶದ ಜೊತೆಗೆ ಕರ್ನಾಟಕದ ಗೃಹ ಸಚಿವರ ವಿಶೇಷ ಅಧಿಕಾರಿಯಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಲಾಗಿದೆ.
