ಬೆಳ್ಳಂ ಬೆಳೆಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್..ಹುಬ್ಬಳ್ಳಿಯ ಕೆಎಸ್ ಆರ್ ಟಿಸಿ ಚೀಪ್ ಮೆಕ್ಯಾನಿಕಲ್ ಬಲೆಗೆ

Share to all

ಬೆಳ್ಳಂ ಬೆಳೆಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್..ಹುಬ್ಬಳ್ಳಿಯ ಕೆಎಸ್ ಆರ್ ಟಿಸಿ ಚೀಪ್ ಮೆಕ್ಯಾನಿಕಲ್ ಬಲೆಗೆ..

ಹುಬ್ಬಳ್ಳಿ:- ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಲ್ಲಿ ಚೀಪ್ ಮೆಕ್ಯಾನಿಕ್ ಆಗಿರುವ ಸಿದ್ದೇಶ್ವರ ಹೆಬ್ಬಾಳ ಇವರ ಹುಬ್ಬಳ್ಳಿಯ ಕಛೇರಿ ಹಾಗೂ ಡಾವಣಗೇರಿಯ ಮನೆಯ ಮೇಲೆ ಏಕಕಾಲಕ್ಕೆ ಲೋಕಾಯುಕ್ತರು ರೇಡ್ ಮಾಡಿದ್ದಾರೆ..

ಡಾವಣಗೇರಿಯ ಲೋಕಾಯುಕ್ತ ಎಸ್ಪಿಎ ಎಸ್ ಕೌಲಾಪುರೆ ನೇತೃತ್ವದ ಹನ್ನೆರಡು ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ.ರಾಜ್ಯದಲ್ಲಿ ಬ್ರಷ್ಟರ ಭೇಟಿ ಮುಂದುವರೆದಿದ್ದು ಬೆಳ್ಳಂ ಬೆಳೆಗ್ಗೆ ಬ್ರಷ್ಟ ಅಧಿಕಾರಿಗಳ ಪಾಲಿಗೆ ಲೋಕಾಯುಕ್ತ ಪೋಲೀಸರು ಬಿಗ್ ಶಾಕ್ ನೀಡಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಮತ್ತು ಸಾರ್ವಜನಿಕರ ಹಣ ದುರುಪಯೋಗದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author