ಶಾಸಕ ಪ್ರಸಾದ ಅಬ್ಬಯ್ಯಗೆ ಮಂತ್ರಿ ಸ್ಥಾನ ಕೊಡಿ…ಜೋರಾಯ್ತು ಅಭಿಮಾನಿಗಳ ಕೂಗು…

Share to all

ಶಾಸಕ ಪ್ರಸಾದ ಅಬ್ಬಯ್ಯಗೆ ಮಂತ್ರಿ ಸ್ಥಾನ ಕೊಡಿ…ಜೋರಾಯ್ತು ಅಭಿಮಾನಿಗಳ ಕೂಗು...

ಹುಬ್ಬಳ್ಳಿ:-ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಹುಬ್ಬಳ್ಳಿಯಲ್ಲಿ ಕೂಗು ಜೋರಾಗಿದೆ. ನವನಗರ ಎಪಿಎಂಸಿಯಲ್ಲಿ ವ್ಯಾಪಾರಸ್ಥರು ಹಾಗೂ ವರ್ತಕರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ ಗಮನಸೆಳೆದರು.

ಹುಬ್ಬಳ್ಳಿಯ ನವನಗರ ಎಪಿಎಂಸಿಯಲ್ಲಿ ಕಾಯಿಪಲ್ಯ ವ್ಯಾಪಾರಸ್ಥರು, ಹಣ್ಣು-ಹಂಪಲು ವ್ಯಾಪಾರಿಗಳು ಹಾಗೂ ವಿವಿಧ ವರ್ತಕರು ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ, ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಹುಬ್ಬಳ್ಳಿಯಲ್ಲಿ ಕೂಗು ಮತ್ತಷ್ಟು ಜೋರಾಗಿದ್ದು, ಪಕ್ಷ ಈ ಬೇಡಿಕೆಗೆ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದು ಕಾದು ನೋಡಬೇಕಿದೆ.

ಉದಯ ವಾರ್ತೆ ನ್ಯೂಸ್ ಕನ್ನಡ ಹುಬ್ಬಳ್ಳಿ


Share to all

You May Also Like

More From Author