ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾ ರೇಡ್..ಏಕಕಾಲಕ್ಕೆ ಮೂರು ಕಡೆ ದಾಳಿ…
ಧಾರವಾಡ:-ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ಅಭಿಯಂತರ ಸುರೇಂದ್ರ ಕುಮಾರ ಅವರ ಮನೆ ,ಕಛೇರಿ ಹಾಗೂ ಅವರ ಪಿಜಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿ ಸತತ ಮೂರು ಘಂಟೆಗಳಿಂದ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಎಸ್ ಪಿ ಶಿದ್ದಲಿಂಗಪ್ಪ ನೇತೃತ್ವದಲ್ಲಿ ಸುರೇಂದ್ರ ಕುಮಾರ ಅವರ ಧಾರವಾಡದ ನಿಸರ್ಗ ಲೇಔಟ್ ಮನೆ,ಇಸ್ಕಾನ್ ಟೆಂಪಲ್ ಬಳಿಯ ನಿರ್ಮಿತಿ ಕೇಂದ್ರದ ಕಛೇರಿ ಹಾಗೂ ಬಾಡಿಗೆ ಮನೆ ಮೇಲೆ ದಾಳಿ ಮಾಡಲಾಗಿದೆ.ಲೋಕಾಯುಕ್ತರು ದಾಳಿ ಮಾಡಿದ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಸುರೇಂದ್ರ ಕುಮಾರ ಲೋಕಾಯುಕ್ತರು ಮನೆಯೊಳಗೆ ಬರುತ್ತಿದ್ದಂತೆ ತಬ್ಬಿಬ್ಬಾಗಿದ್ದರು ಎನ್ನಲಾಗಿದೆ.