ಸಂಘಟನೆಯ ಹೆಸರಲ್ಲಿ ನಡೀತಾ ಅಮಾನವೀಯ ಕೃತ್ಯ…!ಯುಪಿ..ಬಿಹಾರ ಆಯ್ತಾ ಹುಬ್ಬಳ್ಳಿ…!

Share to all

ಸಂಘಟನೆಯ ಹೆಸರಲ್ಲಿ ನಡೀತಾ ಅಮಾನವೀಯ ಕೃತ್ಯ…!ಯುಪಿ..ಬಿಹಾರ ಆಯ್ತಾ ಹುಬ್ಬಳ್ಳಿ…!

ಹುಬ್ಬಳ್ಳಿ:-ಸಂಘಟನೆಯ ಹೆಸರಿನಲ್ಲಿ ಯುವ ಜೋಡಿಗೆ ಹೊಡಿ,ಬಡಿ,ಮಾಡಿದ್ದೂ ಅಲ್ಲದೇ ಬೂಟು ಕಾಲಿನಿಂದ ಒದ್ದು ತಮಗೆ ಬೇಕಾದ ರೀತಿಯಲ್ಲಿ ಬೆದರಿಸಿ ವಿಡಿಯೋ ಮಾಡಿಕೊಂಡ ಅಮಾನವೀಯ ಕೃತ್ಯ ಒಂದು ಹುಬ್ಬಳ್ಳಿ ಸಮೀಪ ನಡೀತಾ..?

ಹೌದು ಹುಬ್ಬಳ್ಳು ಸಮೀಪ ದಾಬಾ ಒಂದರಲ್ಲಿ ಯುವ ಜೋಡಿಗಳು ಊಟ ಮಾಡುತ್ತಿರುವಾಗ ಸಂಘಟನೆಯ ಹೆಸರು ಹೇಳಿಕೊಂಡು ಬಂದ ಇಪ್ಪತ್ತಕ್ಕೂ ಹೆಚ್ಚು ಪುಂಡರೂ ಆ ಯುವ ಜೋಡಿಗಳನ್ನು ಬೇರ್ಪಡಿಸಿ ಕರೆದೊಯ್ದು ಹಿಗ್ಗಾ ಮುಗ್ಗಾ ಥಳಿಸಿದ್ದು ಅಲ್ಲದೇ ಅವರ ಕಡೆಯಿಂದ ಪೇಕ್ ವಿಡಿಯೋ ಮಾಡಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಥಳಿತಕ್ಕೆ ಒಳಗಾದ ಯುವಕ ಮತ್ತು ಅವರ ಕುಟುಂಬ ಆರೋಪಿಸಿದೆ.

ಥಳಿತಕ್ಕೊಳಗಾದ ವ್ಯಕ್ತಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು.ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಧಾರವಾಡ ಜಿಲ್ಲಾ ಎಸ್ಪಿ ಗುಂಜನ್ ಆರ್ಯ.ಡಿವಾಯ್ ಎಸ್ಪಿ ವಿನೋದ ಮುಕ್ತೇದಾರ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಮಾಹಿತಿ ಕಲೆ ಹಾಕಿ,ಪ್ರಕರಣ ದಾಖಲಿಸಿಕೊಂಡಿದ್ದಾರೆ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author