ಹುಬ್ಬಳ್ಳಿಯಲ್ಲೊಂದು ಭಯಾನಕ ಕೃತ್ಯ.. ಸ್ಕೂಲ್ ಮಕ್ಕಳ ಕಿಡ್ನಾಪ್ ಮಾಡಿ ಹಣ ಬಂಗಾರ ದೋಚಿದ ರೌಡಿ ಶಿಟರ್ಸ್
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕರನ್ನು ಅಪಹರಿಸಿ, ಹಲ್ಲೆ ನಡೆಸಿ ಹಣ ಹಾಗೂ ಚಿನ್ನ ಕಸಿದುಕೊಂಡ ಆರೋಪ ಕೇಳಿಬಂದಿದೆ. ಇಬ್ಬರ ರೌಡಿ ಶಿಟರ್ಸ್ ಗಾಂಜಾ ಪೆಡ್ಲರ್
ವಿರುದ್ಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಳೆದ 23ರಂದು ಸ್ಕೂಲೊಂದರ ಬಳಿ 15 ವರ್ಷದ ಬಾಲಕ ಹಾಗೂ ಆತನ ಸ್ನೇಹಿತೆ ಮಾತನಾಡುತ್ತ ನಿಂತಿದ್ದಾರೆ. ವೈಟ್ ಆ್ಯಕ್ಟಿವಾದಲ್ಲಿ ಬಂದ ಇಬ್ಬರು ರೌಡಿ ಸಿಟರ್ಸ್ ರಾಹುಲ್ ಅಲಿಯಾಸ್ ಬಬ್ಲು, ಸುಧಾಕರ ತಿಟ್ಲಿ ಈ ಇಬ್ಬರು ಗಾಂಜಾ ಸೇವಿಸಿ ಆ ವಿದ್ಯಾರ್ಥಿಗಳನ್ನು ಹೆದರಿಸಿ, ಹಲ್ಲೆ ಮಾಡಿದ್ದಾರೆ. ನಂತರ ಹಣಕ್ಕಾಗಿ ಬೇಡಿಕೆ ಇಟ್ಟ ಈ ರೌಡಿಗಳು ಕುಸುಗಲ್ ರಸ್ತೆಯ ಹೊಲಕ್ಕೆ ಕರೆದೊಯ್ದು, 3 ಸಾವಿರ ರೂಪಾಯಿ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಮೊಬೈಲ್, ವಾಹನ ಹಾಗೂ 15 ಗ್ರಾಂ ಚಿನ್ನದ ಸರ ಕಸಿದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನು ಹಲ್ಲೆ ಮಾಡುತ್ತಿದ್ದಂತೆ ಬಾಲಕ ಬಾಲಕಿ ಕಿರುಚಿದಾಗ ಬಾಲಕನ ಇಬ್ಬರು ಗೆಳೆಯರು ಸ್ಥಳಕ್ಕೆ ಬಂದಿದ್ದಾರೆ. ನಂತರ ಈ ರಾಹುಲ್ ಅಲಿಯಾಸ್ ಬಬ್ಲು, ಸುಧಾಕರ ತಿಟ್ಲಿ ಅವರ ಮೇಲೆ ಕೂಡ ಹಲ್ಲೆ ಮಾಡಿ ಸ್ಕೂಟಿಯಲ್ಲಿ ಅಪಹರಿಸಿಕೊಂಡು ಕುಸಗಲ್ ಹೊರಹೊಲಯದಲ್ಲಿ ಹೋಗಿ ಹಣ ಕೊಡು ಎಂದು ಕಿರುಕುಳ ನೀಡಿದ್ದಾರೆ. ನಂತರ ಕುಸಗಲ್ ದಲ್ಲಿರುವ ಶ್ರೀನಿಧಿ ದಾಬಾಕ್ಕೆ ಕರೆದೋಯ್ದು ಸಾರಾಯಿ ಕುಡಿದು ಆ ಮಕ್ಕಳಿಂದ ಸಂಬಂಧಿಕರಿಗೆ ಕರೆ ಮಾಡಿಸಿ ಡಾಬಾದ QR ಕೋಡ್ ಮೂಲಕ ಸಂಬಂಧಿಕರಿಂದ 3 ಸಾವಿರ ರೂಪಾಯಿ ವರ್ಗಾವಣೆ ಮಾಡಿಸಿಕೊಂಡು ಬಾಲಕರನ್ನು ಬಿಟ್ಟಿದ್ದಾರೆ ಎನ್ನಲಾಗಿದೆ. ಅಷ್ಟೇ ಬಾಲಕನ ಕೊರಳಿಲಿದ್ದ ಚಿಣ್ಣದ ದೋಚಿಕೊಂಡು ಕಳೆಸಿದ್ದಾರೆ. ಕೂಡಲೇ ಆ ಬಾಲಕರು ಬಂದು ತಮ್ಮ ಪೋಷಕರ ಜೊತೆ ಸೇರಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ಪೊಲೀಸರು ಆ ಇಬ್ಬರು ಆರೋಪಿಗಳು ಹಿಡಿದು ಅರೆಸ್ಟ್ ಮಾಡಿದ್ದಾರೆ.
ಇನ್ನು ಅಘಾತಕಾರಿ ವಿಷಯ ಅಂದ್ರೆ ಈ ಅಪ್ರಾಪ್ತ ಬಾಲಕರು ತಮ್ಮ ಪೋಷಕರ ಜೊತೆ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿಲು ಹೊದಾಗ ಪೊಲೀಸರು ಸಾಯಂಕಾಲ 7 ರಿಂದ ರಾತ್ರಿ 12 ವರೆಗೆ ಕೂಡಿಸಿಕೊಂಡಿದ್ದಾರೆ. ಅಷ್ಟೇ ಅಲ್ದೆ ರಾಹುಲ್ ಅಲಿಯಾಸ್ ಬಬ್ಲು, ಸುಧಾಕರ ತಿಟ್ಲಿ ರೌಡಿ ಶಿಟರ್ಸ್ನ್ನು ಕರೆಯಿಸಿ ದೂರು ನೀಡಲು ಹೊದವರ ಮುಂದೇನೆ ಕೂಡಿಸಿ ಚಿಕನ್ ಬಿರಿಯಾನಿ ಕೊಡಿಸಿದ್ದಾರೆಂದು ಪೊಲೀಸರ ಮೇಲೆ ಆರೋಪ ಕೂಡ ಇದೆ.
ಇನ್ನು ರಾಹುಲ್ ಅಲಿಯಾ ಬಬ್ಲು ಮೇಲೆ ಈಗಾಗಲೇ 5 ಹೊಡೆದಾಟದ ಪ್ರಕರಣಗಳು ದಾಖಲಾಗಿವೆ. ಸುಧಾಕರ ತಿಟ್ಲಿ ವಿರುದ್ಧ ಮೂರು ಕಳ್ಳತನ ಪ್ರಕರಣಗಳು ಇವೆ. ಆದ್ರೂ ಈ ರೌಡಿ ಶಿಟರ್ಸ್ ಪೊಲೀಸರ ಭಯವಿಲ್ಲದೆ ರಾಜಾರೋಷವಾಗಿ ಅನೈತಿಕ ಚಟುವಟಿಕೆ ಮಾಡುತ್ತಿದ್ದಾರೆ. ಶಾಲೆಗೆ ಮಕ್ಕಳು ಹೋಗಲು ಹೆದರುತ್ತಿದ್ದಾರೆ. ಹಗಲಿನಲ್ಲೆ ಹುಬ್ಬಳ್ಳಿಯಲ್ಲಿ ಸ್ಕೂಲ್ ಮಕ್ಕಳನ್ನು ಕಿಡ್ನಾಪ್ ಆಗುತ್ತಿವೆ. ಪೊಲೀಸರು ಏನು ಮಾಡುತ್ತಿದ್ದಾರೆ…? ಇಂತಹ ರೌಡಿಗಳನ್ನು ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.