ಪುಟ್ಟ ಕಂದಮ್ಮನ ಮುಂದೆ ತಾಯಿ ಮಡ್೯ರ್…ತಂದೆ ನೇಣಿಗೆ ಶರಣು..ಗರಗ ಗ್ರಾಮದಲ್ಲೊಂದು ಹೃದಯ ವಿದ್ರಾವಕ ಘಟನೆ.

Share to all

ಪುಟ್ಟ ಕಂದಮ್ಮನ ಮುಂದೆ ತಾಯಿ ಮಡ್೯ರ್…ತಂದೆ ನೇಣಿಗೆ ಶರಣು..ಗರಗ ಗ್ರಾಮದಲ್ಲೊಂದು ಹೃದಯ ವಿದ್ರಾವಕ ಘಟನೆ.

ಧಾರವಾಡ:- ಒಂದೂವರೆ ವರ್ಷದ ಪುಟ್ಟ ಕಂದಮ್ಮನ ಆ ಅಳವು ಆ ಪಾಪಿ ತಂದೆಗೆ ಕೇಳಲೇ ಇಲ್ಲಾ…ಆ ಕಂದನ ಎದುರೇ ಪತ್ನಿಯನ್ನು ಬರ್ಭರವಾಗಿ ಕೊಲೆ ಮಾಡಿ ತಾನೂ ಸಹ ಅದೇ ಮಂಚದ ಮೇಲೆ ಹಗ್ಗದಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಒಂದೂವರೆ ವರ್ಷದ ಜಗತ್ತನ್ನೇ ನೋಡದ ಆ ಪುಟ್ಟ ಕಂದಮ್ಮನ್ನಿಗೆ ಜಗತ್ತನ್ನ ತೋರಿಸಲೇ ಇಲ್ಲಾ ಆ ಪಾಪಿ ತಂದೆ.ಧಾರವಾಡ ಜಿಲ್ಲೆಯ ಗರಗ ಗ್ರಾಮದ ಮೌಲಾಸಾಬ (28) ಎಂಬಾತ ತನ್ನ ಪತ್ನಿ ಸಲ್ಮಾ (21)ಳನ್ನು ಕೊಲೆ ಮಾಡಿ ತಾನೂ ಸಹ ನೇಣಿಗೆ ಶರಣಾಗಿದ್ದಾನೆ.

ತಂದೆ ಮತ್ತು ತಾಯಿ ಕಣ್ಣ ಮುಂದೆ ಸಾವನ್ನಪ್ಪಿದರೂ ಏನಾಗುತ್ತೇ ಅನ್ನೋದು ತಿಳಿಯದೇ ಅಳುವುದನ್ನು ಗಮನಿಸಿದ ಸ್ಥಳೀಯರು ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ..ಸ್ಥಳಕ್ಕೆ ಎಸ್ ಪಿ ಗುಂಜನ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author