ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿದ್ದ ಮಡ್೯ರ್ ಕೇಸ್..ಕೊಲೆಗಾರರನ್ನು ವಶಕ್ಕೆ ಪಡೆದ ಪೋಲೀಸರು..

Share to all

ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿದ್ದ ಮಡ್೯ರ್ ಕೇಸ್..ಕೊಲೆಗಾರರನ್ನು ವಶಕ್ಕೆ ಪಡೆದ ಪೋಲೀಸರು..

ಹುಬ್ಬಳ್ಳಿ:- ಕಳೆದ ಶುಕ್ರವಾರ ಮಟ.ಮಟ.ಮದ್ಯಾಹ್ನವೇ ನಡು ರಸ್ತೆಯಲ್ಲಿಯೇ ಯುವಕನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಎಸಿಪಿ ಶಿವಾನಂದ ಚಲವಾದಿ ನೇತೃತ್ವದ ತಂಡ ಬೆಳ್ಳಂ ಬೆಳೆಗ್ಗೆ ವಶಕ್ಕೆ ಪಡೆದಿದೆ.

ಕೊಲೆ ಮಾಡಿದ ಆರೋಪಿಗಳು ಹುಬ್ಬಳ್ಳಿಯ ಈಶ್ವರ ನಗರದ ವೀರೇಂದ್ರ ಮಟ್ಟಿ ತಳಕಲ್ ಹಾಗೂ
ದೀಪಕ್ ಛಲವಾದಿ ಎಂದು ಹೇಳಲಾಗುತ್ತಿದೆ..ಕೊಲೆಯಾದ ದಾದಾಪೀರ ಮಾರುತಿ ತಳಕಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದವನು.

2015 ರಲ್ಲಿ ಈಶ್ವರ ನಗರದ ಮಾರುತಿ ತಳಕಲ್ ಕೊಲೆ ನಡೆದಿತ್ತು .ಆ ಪ್ರಕರಣದಲ್ಲಿ ದಾದಾಪೀರ ಮೊದಲ ಆರೋಪಿಯಾಗಿದ್ದನು ನಂತರ ಆ ಕೊಲೆ ಪ್ರಕರಣ ರಾಜೀ ನಡೆದು ಕೇಸ್ ಖುಲಾಸೆಯಾಗಿತ್ತು.ಅದೇ ದ್ವೇಷದಿಂದಲೇ‌ ದಾದಾಪೀರನ ಕೊಲೆ ನಡೆದಿರಬಹುದು ಎನ್ನಲಾಗಿದೆ.

ಈಗ ಪೋಲೀಸರ ಕೈಗೆ ಸಿಕ್ಕಿರುವ ಆರೋಪಿ ವೀರೇಂದ್ರ ಮಟ್ಟಿ ತಳಕಲ್ಲ್ ಈ ಹಿಂದೆ ಕೊಲೆಯಾಗಿದ್ದ ಮಾರುತಿ ತಳಕಲ್ಲ ಸಹೋದರ..ಇನ್ನೊಬ್ಬ ಆರೋಪಿ ದೀಪಕ ಚಲವಾದಿ ಮಾರುತಿ ಚಲವಾದ ಅವರ ಅಳಿಯ ಎನ್ನಲಾಗಿದೆ..

ಈಗಾಗಲೇ ಪೋಲೀಸರು ಇಬ್ಬರನ್ನೂ ಹುಬ್ಬಳ್ಳಿಯ ಗಬ್ಬೂರ ಬೈಪಾಸ ಬಳಿ ವಶಕ್ಕೆ ಪಡೆದು ಕೊಲೆಗೆ ಕಾರಣವನ್ನು ಕಲೆ ಹಾಕುತ್ತಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author