ಬೆಳಗಾವಿಯಲ್ಲಿ ಕುಂತು ಹುಬ್ಬಳ್ಳಿ-ಧಾರವಾಡದ ಚಕ್ಕಬಂದಿ ಹಾಕಿದ ನೂತನ ಕಮೀಷನರ್ ಬೋರ್ಸೆ..ಹಲವರಿಗೆ ಡವ..ಡವ..
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡದಲ್ಲಿ ಇನ್ಮುಂದೆ ಖಡಕ್ ಕಮೀಷನರ್ ಭೂಶಣ ಬೋರ್ಸೆ ಹವಾ.ಅಕ್ರಮ ದಂಧೆಗಳಿಗೆ ಪುಲ್ ಬ್ರೇಕ್ ಹಾಕುವ ಕಮೀಷನರ್ ಟೆಕ್ನಿಕಲಿ ಬಹಳ ಅಡ್ವಾನ್ಸ್ ಆಗಿರುವ ಅವರು ಟ್ರಾಪಿಕ್ ಕಂಟ್ರೋಲಗೆ ಮೊದಲ ಆದ್ಯತೆ ನೀಡಲಿದ್ದಾರೆ.
ಎಂ ಟೆಕ್ ಪಧವೀದರರಾಗಿರುವ ಐಪಿಎಸ್ ಭೂಶಣ ಬೋರ್ಸೆ..ಎಲ್ಲವನ್ನೂ ಟೆಕ್ನಿಕಲ್ ಆಗಿ ವಿಚಾರ ಮಾಡತಾರಂತೆ..ಬೆಳಗಾವಿಯಲ್ಲಿ ಟ್ರಾಪಿಕ್ ಸಮಸ್ಯೆಗೆ ಇತಿಶ್ರೀ ಹಾಡಿದ ಬೆಸ್ಟ್ ಕಮೀಷನರ್ ಅಂತಾ ಹೆಸರು ಮಾಡಿದ್ದಾರೆ.
ಕ್ರೈಂ ಆ್ಯಂಡ್ ಅಕ್ರಮ ದಂಧೆ ಅಂತಾ ಬಂದರೆ ಸ್ವತಃ ಅವರೇ ಫೀಲ್ಡಿಗಿಳಿಯುವ ಮತ್ತು ನೇರವಾಗಿ ಜನರೊಂದಿಗೆ ಬೆರೆಯುವ ಕಮೀಷನರ ಇವರಾಗಿದ್ದು..ಪ್ರತಿ ದಿನ ಪ್ರತಿ ಕ್ಷಣ ಬೀದಿಗಿಳಿದು ಜನರಿಗೆ ಪ್ರೀತಿಯ ಮಾತುಗಳಿಂದ ಕ್ಷಣ ಮಾತ್ರದಲ್ಲಿ ಸಮಸ್ಯೆ ಬಗೆಹರಿಸುವ ಕಮೀಷನರ್ ಇವರು.
ಎಲ್ಲೆ ಕುಂತು ಎಲ್ಲೇ ಲೋಕೇಷನ್ ಹೇಳೋ ಅಧಿಕಾರಿಗಳಿಗಂತೂ ಇನ್ಮುಂದೆ ಅದು ನಡೆಯಲ್ಲಾ..ದಿನದ 24 ಘಂಟೆಯೂ ಕೆಲಸ…ಕೆಲಸ..ಕೆಲಸ ಅಂತಾ ಬೇತಾಳನಂತೆ ಬೆನ್ನು ಹತ್ತುವ ಕಮೀಷನರ ಅಂತೆ ಅವರು..
ಇನ್ನೂ ಹಲವು ವರ್ಷಗಳಿಂದ ಒಂದೇ ಕಡೆ ಗೂಟಾ ಜಡಿದುಕೊಂಡ ಕುಂತವರನ್ನಂತೂ ಚಾಜ್೯ ತೆಗೆದುಕೊಂಡ ದಿನದಿಂದಲೇ ಲಿಸ್ಟ್ ರೆಡಿ ಅಂತೆ…ಅಲ್ಲದೇ ಇನ್ಮುಂದೆ ಕಮೀಷನರ್ ಹೆಸರಿನಲ್ಲಿ ವಸೂಲಿ ದಂಧೆ ಬಂದ್..ಯಾರದೂ ಒಂದ ಕಪ್ ಚಹಾ ಕುಡಿಯದ ಕಮೀಷನರ್ ಗೆ ಕೆಲಸ ಮುಖ್ಯ ಅಂತೆ.
ಮೂಲತಃ ಮಹಾರಷ್ಟ್ರ ಮೂಲದ ಭೂಶಣ ಬೋರ್ಸೆ ಎಂ ಟೆಕ್ ಪಧವೀದರರಾಗಿದ್ದು..2009 ರ ಕರ್ನಾಟಕ ಕ್ರೇಡರ್ ಐಪಿಎಸ್ ಅಧಿಕಾರಿ..ಸದ್ಯ ಬೆಳಗಾವಿಯ ಪೋಲೀಸ ಕಮೀಷನರ್ ಆಗಿರುವ ಅವರು,ಮಂಡ್ಯ/ದಕ್ಷಿಣ ಕನ್ನಡ,ದಲ್ಲಿ ಎಸ್ ಪಿಯಾಗಿ ಸೇವೆ ಸಲ್ಲಿಸಿದ್ದಾರೆ.