ಬೆಳ್ಳಂ ಬೆಳೆಗ್ಗೆ ಕರೆಂಟ್ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೋಕಾಯುಕ್ತ ಪೋಲೀಸರು…ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ನಾಲ್ಕು ಕಡೆ ರೇಡ್..
ಹುಬ್ಬಳ್ಳಿ:- ಬೆಳ್ಳಂ ಬೆಳೆಗ್ಗೆ ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ಪೋಲೀಸರು ಏಕಕಾಲಕ್ಕೆ ನಾಲ್ಕು ಕಡೆ ಹೆಸ್ಕಾಂ ಎಇಇ ದಂಪತಿಗಳ ಮನೆ..ಕಚೇರಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆಸಿದ್ದಾರೆ.
ಹೆಸ್ಕಾಂ ನಲ್ಲಿ ಎಇಇ ಆಗಿರೋ ಕಿರಣಕುಮಾರ ಬೈಂದೂರ ಹಾಗೂ ಪತ್ನಿ ಪ್ರೀತಿ ಕೆಲಸ ಮಾಡುತ್ತಿದ್ದ ಹೆಸ್ಕಾಂ ಕಛೇರಿ ಹಾಗೂ ಅವರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.ಮನೆಯಲ್ಲಿ ಅಪಾರ ಪ್ರಮಾಣದ ನಗದು..ಚಿನ್ನ.. ಬೆಳ್ಳಿ ಸೇರಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಕ್ಷಯ ಕಾಲೋನಿಯ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ ಸಿಕ್ಕ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೋಲೀಸರು ಗೋಲ್ಡ್ ಸ್ಮಿತ್ ಅವರನ್ನು ಕರೆಸಿ ಬಂಗಾರದ ತೂಕದ ಲೆಕ್ಕ ಹಾಕುತ್ತಿದ್ದಾರೆ..