ಪೊಲೀಸರನ್ನೇ ಯಾಮಾರಿಸಿದ ಹೆಬ್ಬಟ್ಟ್ ಹನುಮಂತ; ದೂರದ ಊರಿನಲ್ಲಿ ಸ್ನೇಹಿತೆಯೊಂದಿಗೆ ಲಲ್ಲೆ…

Share to all

ಪೊಲೀಸರನ್ನೇ ಯಾಮಾರಿಸಿದ ಹೆಬ್ಬಟ್ಟ್ ಹನುಮಂತ; ದೂರದ ಊರಿನಲ್ಲಿ ಸ್ನೇಹಿತೆಯೊಂದಿಗೆ ಲಲ್ಲೆ…

ಹುಬ್ಬಳ್ಳಿ:-ಗೋಕುಲ ರಸ್ತೆಯ ಡಾ.ಆರ್.ಎಂ.ಲೋಹಿಯಾನಗರದಲ್ಲಿ ವ್ಯಾಪಾರ ನಡೆಸುತ್ತಿರುವ ಅನಕ್ಷರಸ್ಥ, ಹೆಬ್ಬಟ್ಟ್ ಹನುಮಂತ ಹೆಣ್ಣುಬಾಕ ಎಂಬುದು ಜಗಜ್ಜಾಹೀರಾಗಿದೆ.

ಒಂದಕ್ಷರ ಓದಲು-ಬರೆಯಲು ಬಾರದ ಈ ಹೆಬ್ಬೆಟ್ಟ್ ಹನುಮಂತ ಹೆಣ್ಣು ಮಕ್ಕಳ ವಿಚಾರದಲ್ಲಿ ಮಾತ್ರ ಎಂಥ ಐಟಿ-ಬಿಟಿ ಉದ್ಯೋಗಿಗಳನ್ನೂ ಮೀರಿಸುತ್ತಾನೆ. ಅಲ್ಲದೆ, ಯುವತಿಯರ ವಿಚಾರದಲ್ಲಿ ಪೊಲೀಸರನ್ನೂ ಯಾಮಾರಿಸಿರುವ ಹೆಬ್ಬಟ್ಟ್ ಹನುಮಂತನ ಬಗ್ಗೆ ಚೆರ್ಚ ಜೋರಾಗಿಯೇ ನಡೆದಿದೆ.

ಮದುವೆಯಾಗಿ ಮಕ್ಕಳಿದ್ದರೂ ಈತನ ಚಟ ಇನ್ನೂ ತೀರಿಲ್ಲ. ಹೆಂಡತಿ ಮಕ್ಕಳು ಮನೆಯಲ್ಲಿ ಇದ್ದಾಗಲೇ ಇನ್ನೊಬ್ಬಳನ್ನು ಮನೆಯಲ್ಲಿಟ್ಟುಕೊಂಡಿದ್ದ ಭೂಪ ಇತ್ತೀಚೆಗೆ ಪ್ರೇಯಸಿಯ ಜೊತೆಗೆ ನಡೆದುಕೊಂಡ ರೀತಿ ಮತ್ತು ಗೋಕುಲ ರಸ್ತೆಯ ಪೊಲೀಸರನ್ನು ಮಂಗ ಮಾಡಿದ ಪರಿಯನ್ನು ಕಂಡು ಜನ ಅಚ್ಚರಿಗೊಂಡಿದ್ದಾರೆ.

ಸ್ನೇಹಿತೆ ಕಾಣೆಯಾಗಿದ್ದಾಳೆ ಎಂದು ಹೆಬ್ಬಟ್ಟ್ ಹನುಮಂತ ಗೋಕುಲ ರೋಡ್ ಪೊಲೀಸ್ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದ. ವಾಹನದ ಮೇಲೆ `ಮೀಡಿಯಾ’ ಎಂದು ಬರೆದುಕೊಂಡು ಓಡಾಡುತ್ತಿದ್ದ ಈತನನ್ನು ಕಂಡು ಈತ ಮಾಧ್ಯಮ ಪ್ರತಿನಿಧಿ ಎಂದುಕೊಂಡು ಈತನ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ತನಿಖೆಯ ಭಾಗವಾಗಿ ಆಕೆಯ ದೂರವಾಣಿ ನಂಬರ್ ಅನ್ನು ಟ್ರೇಸ್ ಮಾಡಿದ ಪೊಲೀಸರು, ಆ ವಿಳಾಸಕ್ಕೆ ತೆರಳಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿ ಯುವತಿಯ ಜೊತೆಗೆ ದೂರು ನೀಡಿದ್ದ ಹೆಬ್ಬೆಟ್ಟ್ ಹನುಮಂತನೂ ಹಾಜರಾಗಿದ್ದನ್ನು ಕಂಡು ಒಂದು ಕ್ಷಣ ಪೊಲೀಸರೇ ಚಕಿತಗೊಂಡಿದ್ದರು. ಬಳಿಕ, ಆಕೆಗೆ ರೇಷನ್ ನೀಡಲು ಬಂದಿದ್ದೆ ಎಂದು ಸಬೂಬು ಹೇಳಿದ ಹನುಮಂತನನ್ನು ವಿಚಾರಣೆ ನಡೆಸಲಾಗಿದೆ.
ಆ ಹಡುಗಿ ಹನುಮಂತನ ಬಗ್ಗೆ ಚಕಾರ ಎತ್ತದ ಕಾರಣ ಕೇಸ್ ಕ್ಲೋಸ್ ಮಾಡಲಾಗಿದೆ.

ಇತ್ತೀಚೆಗೆ ಅದೇ ಗೋಕುಲ ರಸ್ತೆಯ ರಾಜ್ ಹೋಟೆಲ್ ಸಿಬ್ಬಂದಿಯೋರ್ವಳನ್ನು ಪಟಾಯಿಸಿ ಮಾಡಬಾರದ್ದನ್ನು ಮಾಡಿ ಮಾಡಿ ತಗಲಾಕ್ಕೊಂಡು ಧರ್ಮದೇಟನ್ನೂ ತಿಂದಿದ್ದಾನೆ.
ಹೆಬ್ಬೆಟ್ಟ್ ಹನುಮಂತ ತನ್ನ ಸ್ವಂತ ಅಕ್ಕ-ಭಾವನಿಗೆ ಮಾಡಿದ ಅನ್ಯಾಯವೇನು ಎಂಬುದು ಮುಂದಿನ ಸಂಚಿಕೆಯಲ್ಲಿ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author