ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಚರಣೆ.. 13 kg ಗೂ ಹೆಚ್ಚು ಗಾಂಜಾ ವಶ.. ಇಬ್ಬರ ಬಂಧನ.. ಇಬ್ಬರು ಪರಾರಿ..
ಹುಬ್ಬಳ್ಳಿ:-ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಕಳೆದ ಎರಡು ತಿಂಗಳಿಂದ ಎನ್ಡಿಪಿಎಸ್ಗೆ ಹೆಚ್ಚು ಒತ್ತುಕೊಟ್ಟಿರುವ ಸಿಸಿಬಿ ಪೊಲೀಸರು ಇಂದು ಹದಿಮೂರು ಕೆಜಿಗು ಹೆಚ್ಚು ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ ಅಲ್ಲದೆ ಇಬ್ಬರು ಪರಾರಿಯಾಗಿದ್ದು ತನಿಖೆ ಮುಂದುವರಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೋರ್ಸೆ ಅವರು ಅಧಿಕಾರ ವಹಿಸಿಕೊಂಡ ನಂತರ ಹುಬ್ಬಳ್ಳಿಯಲ್ಲಿ ಒಂದು ತಿಂಗಳಲ್ಲಿ 3 ಕೆ.ಜಿ, 6 ಕೆಜಿ ಈಗ 13 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.. ಗಾಂಜಾ ಹಿಂದೆ ಬಿದ್ದಿರುವ ಸಿಸಿಬಿ ಪೊಲೀಸ್ ಟೀಮ್ ಹಗಲಿರುಳು ಕೆಲಸ ಮಾಡುತ್ತಿದ್ದು ಪೊಲೀಸ್ ಕಮಿಷನರ್ ಸಿಸಿಬಿ ಟೀಮ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.