ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆಗೆ ಬಿಡಲ್ಲಾ..ಧರಣಿ ಕೂಡ್ರತೇವಿ..ಸರಕಾರಕ್ಕೆ ಎಚ್ಚರಿಕೆ ಕೊಟ್ಟ ಗುಂಟ್ರಾಳ..
ಹುಬ್ಬಳ್ಳಿ:-ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ರುದ್ರೇಶ ಘಾಳಿ ಅವರ ವರ್ಗಾವಣೆಗೆ ನಡೆದಿರುವ ಹುನ್ನಾರ ಖಂಡನಿಯ ಅವರ ವರ್ಗಾವಣೆ ಆಗಬಾರದು..ಒಂದು ವೇಳೆ ಸರಕಾರ ಕಮೀಷನರ್ ಅವರನ್ನ ವರ್ಗಾವಣೆ ಮಾಡಿದ್ದೇ ಆದರೆ ನಾವು ಧರಣಿ ಮಾಡತೇವಿ ಎಂದು ವಿಜಯ ಗುಂಟ್ರಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಡಾ.ರುದ್ರೇಶ ಘಾಳಿ ಅವರು ಅಧಿಕಾರ ವಹಿಸಿಕೊಂಡ ನಂತರ ಪಾರದರ್ಶಕ ಆಡಳಿತ ನಡೆಸಿದ್ದಾರೆ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಈ ಮೂಲಕ ಜನಮನ್ನಣೆ ಪಡೆದುಕೊಂಡಿದ್ದಾರೆ ಅವರು ದಿನಾಂಕ 12-05-2025 ರಂದು 126 ಜನ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡಿದ್ದಾರೆ
ದಿನಾಂಕ 01-10-2025 ರಂದು ಗುತ್ತಿಗೆ ರದ್ದುಪಡಿಸಿ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸಿದ್ದಾರೆ ಈ ಮೂಲಕ ಗುತ್ತಿಗೆ ಶೋಷಣೆಯಿಂದ ಪೌರಕಾರ್ಮಿಕರಿಗೆ ವಿಮೋಚನೆ ದೊರಕಿಸಿಕೊಟ್ಟಿದಾರೆ
ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಮಾಸಿಕ ವೇತನ, ಪಾವತಿ, ನಿಗದಿತ ಅವಧಿಯಲ್ಲಿ ಸಂಕಷ್ಟ ಭತ್ಯೆ ಪಾವತಿ, ಬೆಳಗಿನ ಉಪಹಾರ ಭತ್ಯೆ ನಗದು ರೂಪದಲ್ಲಿ ಪ್ರತಿ ತಿಂಗಳು ಪಾವತಿ, ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸುಮಾರು 40 ಕ್ಕೂ ಹೆಚ್ಚು ಪೌರಕಾರ್ಮಿಕರ ಕುಟುಂಬಗಳಿಗೆ ರೂ 10 ಲಕ್ಷ ಪರಿಹಾರ ಹಾಗೂ ಅವಲಂಬಿತರಿಗೆ ನೇರ ವೇತನ ಪೌರಕಾರ್ಮಿಕರಾಗಿ ನೇಮಕಾತಿ ಮಾಡಿಕೊಂಡಿದ್ದಾರೆ ಅಲ್ಲದೇ ಪ್ರಸ್ತುತ 215 ಜನ ಪೌರಕಾರ್ಮಿಕರ ನೇರ ನೇಮಕಾತಿಗೆ ದಿನಾಂಕ 02-11-2026 ರಂದು ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ ಇಂತಹ ಸಂದರ್ಭದಲ್ಲಿ ಇವರನ್ನು ವರ್ಗಾವಣೆ ಮಾಡಿದರೆ ಪೌರಕಾರ್ಮಿಕರ ನೇರ ನೇಮಕಾತಿ ಪಾರದರ್ಶಕವಾಗಿ ನಡೆಯುವುದು ಅನುಮಾನ ಆದಕಾರಣ ಸರ್ಕಾರ ಇವರ ಸೇವೆಯನ್ನು ಪಾಲಿಕೆಯಲ್ಲಿ ಮುಂದುವರಿಸಬೇಕು
ಬೇರೆ ಯಾರಾದರೂ ಹೊಸದಾಗಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡವರು ಪಾಲಿಕೆಯಲ್ಲಿರುವ ಎಲ್ಲಾ ಆಡಳಿತಾತ್ಮಕ ವಿಷಯಗಳನ್ನು ತಿಳಿದುಕೊಳ್ಳಲು ಕನಿಷ್ಠ 6 ತಿಂಗಳು ಸಮಯ ಬೇಕಾಗುತ್ತದೆ
ಆದಕಾರಣ ಆಯುಕ್ತರಾದ ಡಾ.ರುದ್ರೇಶ ಘಾಳಿ ಅವರಿಗೆ ಕನಿಷ್ಠ 3 ವರ್ಷ ಪಾಲಿಕೆಯಲ್ಲಿ ಸೇವೆಗೆ ಅವಕಾಶ ನೀಡಬೇಕು
ತಪ್ಪಿದಲ್ಲಿ ಸಂಘವು ಅವಳಿ ನಗರದ ಸ್ವಚ್ಛತ್ತಾ ಕೆಲಸವನ್ನು ಸ್ಥಗಿತಗೊಳಿಸಿ ಉಗ್ರಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯ.